ನೆಹರು ಬದಲು ಪಟೇಲರು ಪ್ರಧಾನಿಯಾಗಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು : ಮೋದಿ

ದೆಹಲಿ : ಜವಹರಲಾಲ್‌ ನೆಹರೂ ಅವರು ಪ್ರಜಾಪ್ರಭುತ್ವಕ್ಕೆ ನೀಡಿದ ಕೊಡುಗೆ ಅಪಾರ. ನೆಹರು ಅವರ ಬದಲು ಸರ್ದಾರ್‌ ವಲ್ಲಭಬಾಯಿ ಪಟೇಲರು ಪ್ರಧಾನಿಯಾಗಿದ್ದರೆ ಪೂರ್ತಿ ಕಾಶ್ಮೀರವೇ ನಮ್ಮದಾಗಿರುತ್ತಿತ್ತು . ಆದರೆ ಕಾಂಗ್ರೆಸ್‌ ಪಟೇಲರಿಗೆ ಮೋಸ ಮಾಡಿತ್ತು ಎಂದು ಮೋದಿ ಕಾಂಗ್ರೆಸ್‌ ವಿರುದ್ದ ಗುಡುಗಿದ್ದಾರೆ.

ಸಂಸತ್‌ನಲ್ಲಿಂದು ಮಾತನಾಡಿದ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಕಾಂಗ್ರೆಸ್‌ನವರದ್ದು ವಂಶಪಾರಂಪರ್ಯ ರಾಜಕೀಯ. ಅವರಿಗೆ ಮೊದಲು ಕುಟುಂಬ, ಆಮೇಲೆ ದಶ. ನೀವು ದೇಶವನ್ನು ವಿಭಜಿಸಿದ್ದೀರಿ. ಭಾರತ ವಿಭಜನೆ ಮಾಡಿರುವುದು ನಿಮ್ಮ ಇತಿಹಾಸದಲ್ಲಿ ದಾಖಲಾಗಿದೆ ಎಂದಿದ್ದಾರೆ. ಸ್ವತಂತ್ರ್ಯ ಸಿಕ್ಕಿದಾಗಿನಿಂದಲೂ ನೀವು ಕೆಟ್ಟ ಕೆಲಸಗಳನ್ನೇ ಮಾಡುತ್ತಾ ಬಂದಿದ್ದೀರಿ. ನಿಮ್ಮ ಕೆಲಸಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ. ಭಾರತವನ್ನು ಇಬ್ಭಾಗ ಮಾಡಿದಂತೆ ಕಾಂಗ್ರೆಸ್‌ ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿತು. ಪಟೇಲರು ಪ್ರಧಾನಿಯಾಗಿದ್ದರೆ ಈಡೀ ಕಾಶ್ಮೀರ ಇಂದು ನಮ್ಮದಾಗಿರುತ್ತಿತ್ತು ಎಂದಿದ್ದಾರೆ.

ಪ್ರಜಾಪ್ರಭುತ್ವದ ಬಗ್ಗೆ ನಮಗ ಪಾಟ ಮಾಡಲು ಬರಬೇಡಿ. ನಮಗೆ ಯಾರನ್ನೂ ಬೇಧ ಮಾಡುವ ಮನಸ್ಸಿಲ್ಲ. ಎಲ್ಲರನ್ನು ನಾವು ಒಂದೇ ರೀತಿ ನೋಡುತ್ತೇವೆ. ನಿಮ್ಮಿಂದ ನಾವು ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com