ನಾವು ನೇಮ್ ಚೇಂಜರ್ಸ್‌ಗಳಲ್ಲ, ಏಮ್‌ ಚೇಜರ್ಸ್‌ : ಕಾಂಗ್ರೆಸ್‌ಗೆ ಮೋದಿ ತಿರುಗೇಟು

ದೆಹಲಿ : ಬಿಜೆಪಿಯವರು ನೇಮ್‌ ಚೇಂಜರ್ಸ್‌ಗಳು ಎಂದಿದ್ದಕ್ಕೆ ಇಂದು ಪ್ರಧಾನಿ ಮೋದಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ನಾವು ನೇಮ್‌ ಚೇಂಜರ್ಸ್‌ಗಳಲ್ಲ, ಏಮ್ ಚೇಸರ್ಸ್‌ಗಳು. ನಮ್ಮ ಗುರಿ ತಲುಪುವುದಕ್ಕಾಗಿ ಶ್ರಮ ವಹಿಸುತ್ತಿದೆ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ತನ್ನ 60 ವರ್ಷದ ಅವಧಿಯಲ್ಲಿ ಎಷ್ಟೆಲ್ಲಾ ತಪ್ಪು ಮಾಡಿದೆ. ಆದರೂ ನಮ್ಮ ವಿರುದ್ದ ಟೀಕೆ ಮಾಡುತ್ತಿದೆ. ಇದನ್ನು ಬಿಟ್ಟು ಕಾಂಗ್ರೆಸ್‌ಗೆ ಬೇರೆ ಕೆಲಸವಿಲ್ಲ ಎನಿಸುತ್ತಿದೆ. ನಾವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಎಲ್ಲಾ ಯೋಜನೆಗಳನ್ನು ಟೀಕೆ ಮಾಡುವುದು ಸರಿಯಲ್ಲ. ಇಂದು ಕಾಂಗ್ರೆಸ್‌ಗೆ ಶೋಭೆಯೂ ಅಲ್ಲ. ಕಾಂಗ್ರೆಸ್‌ನ ಅನೇಕ ಯೋಜನೆಗಳ ಬಗ್ಗೆ ನಾನೇ ಎಷ್ಟೋ ಬಾರಿ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ.

ಭಾರತವನ್ನು ನವ ಭಾರತ ನಿರ್ಮಾಣ ಮಾಡುವಲ್ಲಿ ಕೇಂದ್ರ ಸರ್ಕಾರ ಕಟಿಬದ್ದವಾಗಿದೆ ಎಂದಿರುವ ಮೋದಿ, ಕಾಂಗ್ರೆಸ್‌ಗೆ ಇದು ಬೇಡವಾಗಿದೆ. ಅವರು ಅಂದಿನ ಹಳೆಯ ಯೋಜನೆಗಳನ್ನೇ ಗುಡ್ಡೆ ಹಾಕಿಕೊಂಡು ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದರೆ, ಅಭಿವೃದ್ಧಿಯಾಗುವುದಾದರೂ ಹೇಗೆ. ಅವರಿಗೆ ಹಿಂದಿದ್ದ ಭಾರತವೇ ಬೇಕು, ನವ ಭಾರತ ನಿರ್ಮಾಣದ ಕನಸೇ ಅವರಿಗಿಲ್ಲ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com