Cricket-IND vs SA : ಸ್ಮೃತಿ ಮಂದಾನಾ ಆಕರ್ಷಕ ಶತಕ : ಸರಣಿ ಭಾರತದ ಕೈವಶ

ಕಿಂಬರ್ಲಿಯ ಡೈಮಂಡ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತದ ವನಿತೆಯರು 178 ರನ್ ಅಂತರದ ಭರ್ಜರಿ ಜಯ ಸಾಧಿಸಿದ್ದಾರೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಭಾರತ ನಿಗದಿತ 50 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 302 ರನ್ ಮೊತ್ತ ಸೇರಿಸಿತು. ಆಕರ್ಷಕ ಶತಕ ಗಳಿಸಿದ ಆರಂಭಿಕ ಬ್ಯಾಟ್ಸವುಮನ್ ಸ್ಮೃತಿ ಮಂದಾನಾ 129 ಎಸೆತಗಳಲ್ಲಿ 135 ರನ್ ಬಾರಿಸಿದರು. ಹರ್ಮನ್ ಪ್ರೀತ್ ಕೌರ್ 55 ಹಾಗೂ ವೇದಾ ಕೃಷ್ಣಮೂರ್ತಿ 51 ರನ್ ಗಳಿಸಿದರು.

ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 30.5 ಓವರುಗಳಲ್ಲಿ 124ಕ್ಕೆ ಆಲೌಟ್ ಆಯಿತು. ಭಾರತದ ಪರವಾಗಿ ಪೂನಮ್ ಯಾದವ್ 4, ರಾಜೇಶ್ವರಿ ಗಾಯಕ್ವಾಡ್ 2 ಹಾಗೂ ದೀಪ್ತಿ ಶರ್ಮಾ 2 ವಿಕೆಟ್ ಪಡೆದರು. ಈ ಮೂಲಕ ಭಾರತದ ವನಿತೆಯರು 3 ಪಂದ್ಯಗಳ ಏಕದಿನ ಸರಣಿಯನ್ನು 2-0 ಯಿಂದ ಕೈವಶ ಮಾಡಿಕೊಂಡಿದ್ದಾರೆ.

Leave a Reply

Your email address will not be published.