Vijay Hazare Trophy : ಬರೋಡಾ ವಿರುದ್ಧ 85 ರನ್ ಜಯ : ಕರ್ನಾಟಕದ ಶುಭಾರಂಭ

2018ನೇ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಗೆಲುವಿನ ಶುಭಾರಂಭ ಮಾಡಿದೆ. ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ಬರೋಡಾ ವಿರುದ್ಧ 85 ರನ್ ಅಂತರದ ಜಯ ಸಾಧಿಸಿದೆ.

ಟಾಸ್ ಗೆದ್ದ ಬರೋಡಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ನಿಗದಿತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 312 ರನ್ ಕಲೆ ಹಾಕಿತು. ಕರ್ನಾಟಕದ ಪರವಾಗಿ ಮಯಂಕ್ ಅಗರವಾಲ್ 109 ಹಾಗೂ ಆರ್ ಸಮರ್ಥ್ 77 ರನ್ ಗಳಿಸಿದರು.

ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ VJD ನಿಯಮದ ಆಧಾರದ ಮೇಲೆ ಬರೋಡಾ ತಂಡಕ್ಕೆ 265 ರನ್ ಟಾರ್ಗೆಟ್ ನೀಡಲಾಯಿತು. ಗುರಿಯನ್ನು ಬೆನ್ನತ್ತಿದ ಬರೋಡಾ 37 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 180 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಕರ್ನಾಟಕದ ಕೆ.ಗೌತಮ್ 4 ಹಾಗೂ ಶ್ರೇಯಸ್ ಗೋಪಾಲ್ 3 ವಿಕೆಟ್ ಪಡೆದರು.

Leave a Reply

Your email address will not be published.

Social Media Auto Publish Powered By : XYZScripts.com