CM ಆಪ್ತ ಬೈರತಿ ಬಸವರಾಜ್‌ K.R ಪುರಂನಲ್ಲಿ 102 ಕೊಲೆ ಮಾಡಿಸಿದ್ದಾರೆ : BJP ಮುಖಂಡ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ಆಪ್ತ ಭೈರತಿ ಬಸವರಾಜ್ ಅವರು ಕೆ.ಆರ್‌ ಪುರಂ ಕ್ಷೇತ್ರದಲ್ಲಿ 102 ಕೊಲೆ ಮಾಡಿಸಿದ್ದಾರೆ ಎಂದು ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಆರೋಪಿಸಿದ್ದಾರೆ.ಅಲ್ಲದೆ ಈ ಸಂಬಂದ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಕೆ.ಆರ್‌ ಪುರಂ ಕ್ಷೇತ್ರದಲ್ಲಿ 102 ಕೊಲೆಗಳಾಗಿವೆ ಎಂದು ಆರ್‌ಟಿಐ ದಾಖಲೆಗಳಿಂದ ತಿಳಿದುಬಂದಿದೆ. ಈ ಕೊಲೆಗಳಲ್ಲಿ ಶಾಸಕರ ಬೆಂಬಲಿಗರ ಕೈವಾಡವೂ ಇದೆ. ಕಾನೂನು ಸುವ್ಯವಸ್ಥೆ ಸರಿ ಇದೆ ಎಂದು ಸಿ ಎಂ ಹೇಳುತ್ತಾರೆ. ಆದರೆ 102 ಕೊಲೆಗಳಿಗೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದ್ದಾರೆ.

ಇನ್ನು ಕೆ.ಆರ್‌ ಪುರಂ ಕ್ಷೇತ್ರದಲ್ಲಿ 58 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, 158 ಸರಗಳ್ಳತನ ಪ್ರಕರಣ ದಾಖಲಾಗಿದೆ. ಇಂತಹದ್ದೇ ಕಾರಣ ಪ್ರಧಾನಿ ಮೋದಿಯವರು 10% ಸರ್ಕಾರ ಎಂದು ಆರೋಪಿಸಿದ್ದರು ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬೈರತಿ ಬಸವರಾಜ್, ಇಷ್ಟೆಲ್ಲಾ ಮಾಡಿದ್ದೇನೆ ಎನ್ನುತ್ತೀರಲ್ಲ. ನನ್ನ ಮೇಲೆ ಕೇಸ್‌ ದಾಖಲಾಗಿದೆಯಾ, ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆ ಹೇಳುವುದನ್ನು ಬಿಡಿ. ನಾನು ಭ್ರಷ್ಟಾಚಾರ ಮಾಡಿರುವುದು ಸಾಬೀತಾದರೆ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com