ಮತ್ತೊಬ್ಬ BJP ಕಾರ್ಯಕರ್ತನ ಹತ್ಯೆ : ದುಷ್ಕರ್ಮಿಗಳಿಗೆ ಬಲಿಯಾದ ಕಾರ್ಪೊರೇಟರ್‌ ಪತಿ !

ಬೆಂಗಳೂರು : ರಾಜ್ಯದಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದೆ. ಬೆಂಗಳೂರಿನ ಛಲವಾದಿ ಪಾಳ್ಯದ ಬಿಜೆಪಿ ಕಾರ್ಪೊರೇಟರ್‌ ರೇಖಾ ಕದಿರೇಶ್‌ ಅವರ ಪರಿ ಕದಿರೇಶ್‌ರನ್ನು ನಾಲ್ವರು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಮುನೇಶ್ವರ ಪಾಳ್ಯದ ಬಳಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಕದಿರೇಶ್‌ ಅವರು, ಅಂಜನಪ್ಪ ಗಾರ್ಡನ್‌ ಬಳಿ ತಾವು ನಿರ್ಮಿಸುತ್ತಿರುವ ಮುನೇಶ್ವರ ದೇವಾಲಯವನ್ನು ನೋಡಿಕೊಂಡು ಬರಲು ತೆರಳಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕದಿರೇಶ್‌ ಅವರನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿರುವುದಾಗಿ ತಿಳಿದುಬಂದಿದೆ.

ಕದಿರೇಶ್‌ ಬಿಜೆಪಿ ಕಾರ್ಯಕರ್ತರಾಗಿದ್ದು, ಸಂಸದ ಪಿ.ಸಿ ಮೋಹನ್‌ ಆಪ್ತ ಎಂದು ತಿಳಿದುಬಂದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರುವ ಶಂಕೆ ವ್ಯಖ್ತವಾಗಿದೆ. ಸ್ಥಳಕ್ಕೆ ಡಿಸಿಪಿ ಅನುಚೇತ್‌ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಹತ್ಯೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com