ವೈದ್ಯನ ಯಡವಟ್ಟು : ಒಂದೇ ಸಿರಿಂಜ್‌ನಲ್ಲಿ ಗ್ರಾಮಸ್ಥರಿಗೆ ಇಂಜೆಕ್ಷನ್‌ : 40 ಮಂದಿಗೆ HIV ಸೋಂಕು

ಲಖನೌ : ಉತ್ತರ ಪ್ರದೇಶದಲ್ಲಿ ಭಾರೀ ವೈದ್ಯಕೀಯ ದುರಂತ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಗ್ರಾಮವೊಂದ 40 ಮಂದಿಗೆ ಒಂದೇ ಸಿರಿಂಜ್‌ನಲ್ಲಿ ಇಂಜಕ್ಷನ್‌ ನೀಡಿದ್ದು, ಪರಿಣಾಮ 40 ಮಂದಿಗೆ ಎಚ್‌ಐವಿ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ.

ಉತ್ತರ ಪ್ರದೇಶದ ಉನ್ನಾವ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ನಕಲಿ ವೈದ್ಯನೋರ್ವ ಚಿಕಿತ್ಸೆಗೆಂದು ಬಂದ ಮಂದಿಗೆ ಒಂದೇ ಸಿರಿಂಜ್‌ನಲ್ಲಿ ಇಂಜೆಕ್ಷನ್‌ ನೀಡಿದ್ದು, ಪರಿಣಾಮ 40 ಮಂದಿ ಎಚ್‌ಐವಿ ಸೋಕು ಪತ್ತೆಯಾಗಿದೆ. ವೈದ್ಯನ ವಿರುದ್ದ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ದೂರು ನೀಡಿದ್ದು, ಪೊಲೀಸ್‌ ಠಾಣೆಯಲ್ಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಎನ್‌ಜಿಒ ಸಂಸ್ಥೆಯೊಂದು ಉನ್ನಾವ್‌ ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್‌ ಮಾಡಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಕ್ಯಾಂಪ್ ಆರಂಭವಾಗಿದ್ದು, ಈ ವೇಳೆ ಗ್ರಾಮಸ್ಥರ ರಕ್ತ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ 40 ಮಂದಿಗೆ ಎಚ್‌ಐವಿ ಸೋಂಕು ಇರುವುದು ಪತ್ತೆಯಾಗಿದೆ.

ಈ ವೇಳೆ ಆ ಗ್ರಾಮದ ವೈದ್ಯನ ಬಗ್ಗೆ ವಿಚಾರಿಸಿದಾಗ ಆತ ನಕಲಿ ವೈದ್ಯ ಎಂಬುದು ತಿಳಿದುಬಂದಿದೆ. ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ನಕಲಿ ವೈದ್ಯನ ವಿರುದ್ದ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸದ್ಯ ಗ್ರಾಮದ ಶೇ 25ರಷ್ಟು ಮಂದಿಯ ರಕ್ತವನ್ನು ಮಾತ್ರ ನಾವು ಪರಿಶೀಲನೆಗೆ ಕಳುಹಿಸಿದ್ದೇವೆ. ಇನ್ನುಳಿದವರ ರಕ್ತ ಮಾದರಿ ಪರೀಕ್ಷಿಸಲಾಗುತ್ತಿದೆ. ಇನ್ನುಳಿದ ಎಷ್ಟು ಮಂದಿಗೆ ಎಚ್‌ಐವಿ ಸೋಂಕು ಹರಡಿದೆ ಎಂಬುದು ತಿಳಿದಿಲ್ಲ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಹೊರಬೀಳುವುದಾಗಿ ವೈದ್ಯಕೀಯ ಕ್ಯಾಂಪ್‌ ಮುಖ್ಯಸ್ಥರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com