ಯಾರು ಏನೇ ಮಾಡಿದ್ರೂ ನನ್ನನ್ನು ರಾಜಕೀಯವಾಗಿ ಅಲುಗಾಡಿಸೋಕ್ಕಾಗಲ್ಲ : JDS ಸಂಸದ

ಮೈಸೂರು : ಯಾವುದೇ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ಕಳುಹಿಸಿದರೂ ನಾನು ಜೈಲಿನಿಂದಲೇ ಸ್ಪರ್ಧೆ ಮಾಡುವುದಾಗಿ ಸಂಸದ ಸಿ.ಎಸ್‌ ಪುಟ್ಟರಾಜು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಲ್ಲಿ ಮಾತನಾಡಿದ ಅವರು, ವಿರೋಧಿಗಳು ನನ್ನ ವಿರುದ್ಧ ಏನೇ ಪಿತೂರಿ ಮಾಡಲಿ, ನನ್ನನ್ನು ರಾಜಕೀಯವಾಗಿ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಸಿಬಿಐ, ಸಿಐಡಿ ಯಾವುದೇ ತನಿಖೆ ಮಾಡಿಸಿ ಜೈಲಿಗೆ ಕಳುಹಿಸಿದರೂ ನಾನು ಬಗ್ಗುವುದಿಲ್ಲ. ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಅಧಿಕ ಲೀಡ್‌ನಿಂದ ಖಂಡಿತಾ ಗೆದ್ದು ಬರುತ್ತೇನೆ ಎಂದಿದ್ದಾರೆ.

ಪುಟ್ಟರಾಜು ವಿರುದ್ಧ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರವಾಗಿ ನಿವೇಶನ ಪಡೆದ ಆರೋಪವಿದ್ದು ಈಗಾಗಲೆ  ಸಿಬಿಐ ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಜೊತೆಗೆ
ಬೇಬಿಬೆಟ್ಟ ಕಲ್ಲುಗಣಿಗಾರಿಕೆ ಪ್ರಕರಣವೂ ಸಿಐಡಿ ತೆಕ್ಕೆಗೆ ಹೋದ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶದಲ್ಲಿ ಪುಟ್ಟರಾಜು ಈ ರೀತಿ ಹೇಳಿದ್ದಾರೆ.

Leave a Reply

Your email address will not be published.