ವಿವಾದದ ನಡುವೆಯೇ ಬಿಡುಗಡೆಯಾದ ಎರಡೇ ವಾರದಲ್ಲಿ 200 ಕೋಟಿ ಬಾಚಿದ ಪದ್ಮಾವತ್‌

ಮುಂಬೈ : ರಜಪೂತರ ರಾಣಿ ಪದ್ಮಾವತಿಯನ್ನು ಅವಮಾನ ಮಾಡಲಾಗಿದೆ ಎಂದು ಪದ್ಮಾವತಿ ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಪದ್ಮಾವತ್‌ ಸಿನಿಮಾ ಎರಡೇ ವಾರದಲ್ಲಿ 200 ಕೋಟಿ ಬಾಚಿಕೊಂಡಿದೆ.

ಸಂಜಯ್‌ ಲೀಲಾ ಬನ್ಸಾಲಿ ಅವರ ನಿರ್ದೇಶನದ ವಿವಾದಿತ ಚಿತ್ರ ವಿವಾದದಿಂದಲೇ ಸುದ್ದಿಯಾಗಿತ್ತು. ಅಲ್ಲದೆ ದೀಪಿಕಾ, ಬನ್ಸಾಲಿ ಅವರಿಗೆ ಬೆದರಿಕೆ ಸಹ ಹಾಕಲಾಗಿತ್ತು. ಕರ್ಣಿ ಸೇನಾ ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಹೇಳಿತ್ತು. ಆದರೆ ಇಷ್ಟೆಲ್ಲಾ ಅಡೆತಡೆಗಳನ್ನು ಮೀರಿರುವ ಪದ್ಮಾವತ್‌ 200ಕೋಟಿಯ ಗಡಿ ದಾಟಿ ಬಾಕ್ಸಾಫೀಸ್‌ ಧೂಳೆಬ್ಬಿಸುತ್ತಿದೆ.

ಭಾರತವೊಂದರಲ್ಲಿ ಈ ಸಿನಿಮಾ 212 ಕೋಟಿ ಬಾಚಿದ್ದು, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಇನ್ನೂ ಸಿನಿಮಾ ತೆರೆ ಕಂಡಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com