Mandya : ಮುಂದುವರಿದ ಸಾವಿನ ಸರಣಿ : ಮತ್ತೆ ಪೆಲಿಕಾನ್‌ ಪಕ್ಷಿಗಳ ಸಾವು

ಮಂಡ್ಯ : ಕೊಕ್ಕರೆ ಬೆಳ್ಳೂರಿನಲ್ಲಿ ಪೆಲಿಕಾನ್‌ ಪಕ್ಷಿಗಳ ಸರಣಿ ಸಾವು ಮುಂದುವರಿದಿದೆ. ನಿನ್ನೆ ಮರದಿಂದ ಐದು ಪೆಲಿಕಾನ್ ಪಕ್ಷಿಗಳು ಕೆಳಗೆ ಬಿದ್ದಿದ್ದು, ಇಂದು ಒಂದು ಪೆಲಿಕಾನ್‌ ಪಕ್ಷಿ ಸಾವಿಗೀಡಾಗಿದೆ. ಇನ್ನು ನಾಲ್ಕು ಪಕ್ಷಿಗಳು ಅಸ್ವಸ್ಥಗೊಂಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅನೇಕ ಪೆಲಿಕಾನ್‌ ಪಕ್ಷಿಗಳ ಸಾವಿಗೀಡಾಗಿದ್ದು, ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಬಳಿಕ ವಿಷಾಹಾರ ಸೇವನೆಯಿಂದ ಪಕ್ಷಿಗಳು ಸಾವಿಗೀಡಾಗುತ್ತಿರುವುದಾಗಿ ತಿಳಿದುಬಂದಿದ್ದು, ಕಳೆದೆರಡು ತಿಂಗಳಿನಿಂದ 20ಕ್ಕೂ ಹೆಚ್ಚು ಹಕ್ಕಿಗಳು ಸಾವಿಗೀಡಾಗಿವೆ. ಇಷ್ಟು ಸಾವಾಗುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅರಣ್ಯ ಇಲಾಖೆ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com