ಜಗ್ಗೇಶ್‌ ಒಬ್ಬ ನರಸತ್ತ ಕಾಡುಪಾಪ : ರಮ್ಯಾ ಅಭಿಮಾನಿಗಳಿಂದ ಆಕ್ರೋಶ

ಮಂಡ್ಯ : ಮಾಜಿ ಸಂಸದೆ ರಮ್ಯಾರನ್ನು ಕನ್ನಡ ಗೊತ್ತಿಲ್ಲದ ಕಾಡುಪಾಪ ಎಂದು ಹಂಗಿಸಿದ್ದ ನಟ ಜಗ್ಗೇಶ್‌ ವಿರುದ್ಧ ರಮ್ಯಾ ಅಭಿಮಾನಿಗಳು ಗರಂ ಆಗಿದ್ದಾರೆ. ಜಗ್ಗೇಶ್‌, ರಮ್ಯಾರ ಕ್ಷಮೆ ಕೋರುವಂತೆ ಆಗ್ರಹಿಸಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು, ಜಗ್ಗೇಶ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದ ವಿಶವೇಶ್ವರಯ್ಯ ಪ್ರತಿಮೆ ಎದುರು ಇಂದು ರಮ್ಯಾ ವಿರುದ್ಧ ಹೇಳಿಕೆ ನೀಡಿದ್ದ ನಟ ಜಗ್ಗೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಒಬ್ಬ ನರಸತ್ತ ಕಾಡುಪಾಪ. ರಮ್ಯಾ ಅವರ ಕ್ಷಮೆ ಕೇಳಲೇಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com