ಮಹದಾಯಿ ವಿವಾದ : ಫೆಬ್ರವರಿ 8ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ

ದೆಹಲಿ : ಮಹದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ನ್ಯಾಯಾಧಿಕರಣ ಫೆಬ್ರವರಿ 8ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇಂದು, ನ್ಯಾಯಾಂಗ ನಿಂದನೆ ಅರ್ಜಿಯನ್ನು ಟ್ರಿಬ್ಯುನಲ್ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸುಪ್ರೀಕೋರ್ಟ್ ಇದರ ವಿಚಾರಣೆ ನಡೆಸಬೇಕು ಎಂದು ಕರ್ನಾಟಕ ಹೇಳಿತ್ತು. ಗೋವಾ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿಯನ್ನು ಪುನರ್‌ ಪರಿಶೀಲನೆ ನಡೆಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13ರೊಳಗೆ ಅರ್ಜಿ ವಿಚಾರಣೆ ಮಾಡುವುದರ ಬಗ್ಗೆ ಮಾಹಿತಿ ನೀಡುವುದಾಗಿ ಟ್ರಿಬ್ಯುನಲ್‌ ಹೇಳಿದೆ.

ಗೋವಾ ಸಲ್ಲಸಿರುವ ನ್ಯಾಯಾಂಗ ಅರ್ಜಿ ಸಂಬಂಧ ರಾಜ್ಯದ ಹಿರಿಯ ವಕೀಲ ಫಾಲಿ ಎಸ್‌ ನಾರಿಮನ್‌ ವಾದ ಮಂಡಿಸಬೇಕಾಗಿತ್ತು. ಆದರೆ ಅವರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅವರ ಬದಲು ಅಶೋಕ್‌ ದೇಸಾಯಿ ಹಾಗೂ ಇಂದಿರಾ ಜೈಸಿಂಗ್‌ ವಾದ ಮಂಡಿಸುತ್ತಿದ್ದಾರೆ. ಆಗಸ್ಟ್‌ನೊಳಗಾಗಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

 

Leave a Reply

Your email address will not be published.