Cricket : 7 ವರ್ಷಗಳ ನಂತರ IPL ನಲ್ಲಿ ಮಿಂಚಲಿದ್ದಾರೆ ಈ ಮಾಜಿ ಕ್ರಿಕೆಟರ್..!

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಏಪ್ರಿಲ್ 7 ರಿಂದ ಆರಂಭಗೊಳ್ಳಲಿದೆ. ಕೆಲವೇ ದಿನಗಳ ಹಿಂದೆ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಹಲವು ಯುವ ದೇಶಿ ಹಾಗೂ ಖ್ಯಾತ ವಿದೇಶಿ ಆಟಗಾರರು ಪಾಲ್ಗೊಳ್ಳಲಿರುವ ಈ ಟೂರ್ನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ವಿಶ್ವ ವಿಖ್ಯಾತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಐಪಿಎಲ್ 11ನೇ ಆವೃತ್ತಿಯಲ್ಲಿ ಆಡುವುದರ ಕುರಿತಂತೆ ಶೇನ್ ವಾರ್ನ್ ಧೃಡಪಡಿಸಿದ್ದಾರೆ. ಎರಡು ವರ್ಷಗಳ ನಿಷೇಧದ ನಂತರ ಆಡುವ ಅರ್ಹತೆಯನ್ನು ಪಡೆದಿರುವ ರಾಜಸ್ಥಾನ ರಾಯಲ್ಸ್ ಪರವಾಗಿ ವಾರ್ನ್ ಕಣಕ್ಕಿಳಿಯಲಿದ್ದಾರಂತೆ.

ಎರಡು ದಿನಗಳ ಟ್ವೀಟ್ ಮಾಡಿದ್ದ ವಾರ್ನ್ ‘ ಈ ವಾರ ನಿಮ್ಮೆಲ್ಲರ ಎದುರು, ನಾನು ಅತ್ಯಂತ ರೋಮಾಂಚಿತನಾಗಿರುವ ಸಂಗತಿಯೊಂದರ ಬಗ್ಗೆ ತಿಳಿಸಲು ಎದುರು ನೋಡುತ್ತಿದ್ದೇನೆ. ಅದು ಐಪಿಎಲ್ ಬಗ್ಗೆಯೇ ಇದೆ ‘ ಎಂದಿದ್ದರು. ಇದೀಗ ತಾವು ಆಡಲಿರುವ ವಿಷಯವನ್ನು ಧೃಡಪಡಿಸಿದ್ದಾರೆ.

2008 ರಲ್ಲಿ ನಡೆದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡ ಚಾಂಪಿಯನ್ ಆಗಿತ್ತು. ವಾರ್ನ್ 2011 ರಲ್ಲಿ ಕೊನೆಯ ಬಾರಿ ಐಪಿಎಲ್ ನಲ್ಲಿ ಆಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com