Cricket : IPL ನಲ್ಲಿ ಅಶ್ವಿನ್ ವಿಭಿನ್ನ ಅವತಾರ : ODI ತಂಡಕ್ಕೆ ಮರಳಲು ಹೊಸ ಪ್ಲಾನ್..!

ಟೀಮ್​ ಇಂಡಿಯಾದ ಎಲ್ಲಾ ಪಾರ್ಮೆಟ್​​ಗಳಲ್ಲಿ ರಾಜನಂತೆ ಮೆರೆದಾತ.. ಬ್ಯಾಟ್ಸ್​​ಮನ್​​ಗಳಿಗೆ ಆಘಾತ ನೀಡ್ತಿದ್ರು.. ಆದರೆ ಈಗ ಬ್ಲ್ಯೂ ಜೆರ್ಸಿ ತೊಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರೇ ಟೀಮ್​ ಇಂಡಿಯಾದ ಶ್ರೇಷ್ಠ ಆಫ್​ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​.

ಟೆಸ್ಟ್​​ಗಳಲ್ಲಿ ಕಮಾಲ್​ನ ಪ್ರದರ್ಶನ ನಿಡ್ತಾ ಇರೋ ಅಶ್ವಿನ್​, ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಬಿಳಿ ಉಡುಪಿನಲ್ಲಿ ಕಮಾಲ್​​ ಪ್ರದರ್ಶನ ನೀಡ್ತಾ ಇರೋ ಸ್ಟಾರ್​ ಪ್ಲೇಯರ್ ದಾಖಲೆಗಳ ಪುಟ ಸೇರುತ್ತಿದ್ದಾರೆ. ವೇಗವಾಗಿ 250 ವಿಕೆಟ್​ ಪಡೆದವರ ಪಟ್ಟಿಯಲ್ಲಿ ಇವರಿಗೆ ಸ್ಥಾನ. ತಮ್ಮ ಕೇರಂ ಹಾಗೂ ಆಫ್​ ಸ್ಪಿನ್​ ಮೂಲಕ ಎದುರಾಳಿಗಳನ್ನು ಕಾಡಿದ್ದ ಬೌಲರ್​​ ಅಶ್ವಿನ್​.

Image result for r ashwin leg spin

ಕಳೆದ ವರ್ಷ ತವರಿನಲ್ಲಿ ನಡೆದ ಟೆಸ್ಟ್​​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದ ಪ್ಲೇಯರ್​, 57 ಟೆಸ್ಟ್​​ ಪಂದ್ಯಗಳಲ್ಲಿ 311 ವಿಕೆಟ್​​ ಪಡೆದಿರುವ ಅಶ್ವಿನ್​​, ಏಕದಿನ ಪಂದ್ಯದಲ್ಲಿ ಕಳೆದ ಆರು ತಿಂಗಳಿನಿಂದ ಕಾಣಿಸಿಕೊಂಡಿಲ್ಲ. ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಶ್ವಿನ್​ ಬ್ಲ್ಯೂ ಜೆರ್ಸಿ ತೊಟ್ಟಿದೇ ಕೊನೆ. ಅಲ್ಲಿಂದ ಈ ವರೆಗೆ ಬ್ಲ್ಯೂ ಜೆರ್ಸಿ ಹಾಕಿಕೊಳ್ಳಲು ಪರದಾಟ ನಡೆಸಿದ್ದಾರೆ.

Image result for r ashwin leg spin

ಟೀಮ್​ ಇಂಡಿಯಾದಲ್ಲಿ ಕಮಾಲ್​ನ ಪ್ರದರ್ಶನ ನೀಡ್ತಿರೋ ರಿಸ್ಟ್​ ಸ್ಪಿನರ್​​ಗಳು ಅನುಭವಿಗಳಿಗೆ ಕೋಕ್​ ನೀಡಿದ್ರು. ಇದರಿಂದ ಬೇಸತ್ತ ಅಶ್ವಿನ್​ ಹೊಸ ಪ್ಲಾನ್​ ಮಾಡಿಕೊಂಡಿದ್ದಾರೆ. ಅದರಂತೆ ಈ ಬಾರಿ ಐಪಿಎಲ್​​ನಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಪರಿಣಾಮ ಮತ್ತೆ ಟೀಮ್​ ಇಂಡಿಯಾಕ್ಕೆ ಲೆಗ್​ ಸ್ಪಿನ್​​ ಬೌಲರ್​ ಆಗುವ ಮೂಲಕ ಎಂಟ್ರಿ ನೀಡೋಕೆ ಪ್ಲಾನ್​ ಮಾಡಿಕೊಂಡಿದ್ದಾರೆ.

Image result for r ashwin leg spin

ಸೋಮವಾರ ನಡೆದ ವಿಜಯ್​ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ತಂಡದ ಪರ ಆಡಿದ ಅಶ್ವಿನ್​, ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. 9.1 ಓವರ್​ ಬೌಲ್​ ಮಾಡಿದ್ದ ಅಶ್ವಿನ್​ 38 ರನ್​ ನೀಡಿ 2 ವಿಕೆಟ್​ ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ತಮಿಳುನಾಡು 76 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com