ಅಕ್ಕನ ಮಗಳನ್ನು ಮದುವೆಯಾದ ಮರುದಿನವೇ ದೊಡ್ಡ ತಪ್ಪು ಮಾಡಿದ ಮದುಮಗ…..!!

ಚಿಕ್ಕಬಳ್ಳಾಪುರ : ಕುಟುಂಬಸ್ಥರು. ಸ್ನೇಹಿತರು ಸೇರಿದಂತೆ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದ ಮದುಮಗ ಮದುವೆಯಾದ ಮರುದಿನವೇ ತಪ್ಪೆಸಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಲೈನ್‌ಮನ್‌ ಆಗಿ ಕೆಲಸ ಮಾಡುತ್ತಿದ್ದ ಯುವಕ ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದ. ಮದುವೆಯ ಮರುದಿನವೇ ಇದ್ದಕ್ಕಿದ್ದಂತೆ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಈತ ಡೆತ್‌ ನೋಟ್‌ ಬರೆದಿದ್ದು, ನನಗೆ ವೈವಾಹಿಕ ಜೀವನ ಇಷ್ಟವಿರಲಿಲ್ಲ. ಅಕ್ಕ ಮತ್ತು ಸಹೋದರನ ಬಲವಂತದಿಂದ ಮದುವೆಯಾಗಿದ್ದೆ. ಪತ್ನಿಯನ್ನು ನನ್ನ ಸಹೋದರನಿಗೆ ಕೊಟ್ಟು ಮದುವೆ ಮಾಡಿ. ನನ್ನ ಸಾವಿಗೆ ನನೇ ಕಾರಣ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮದುಮಗನ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಚಿಕ್ಕಬಳ್ಳಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com