PM ವಿರುದ್ಧ ತೊಡೆ ತಟ್ಟಿದ CM : ಬಹಿರಂಗ ಚರ್ಚೆಗೆ ಅಖಾಡಕ್ಕಿಳಿಯುವಂತೆ ಆಹ್ವಾನ…

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಠಕ್ಕರ್‌ ನೀಡಿದ್ದು, ಭ್ರಷ್ಟಾಚಾರ ಕುರಿತಂತೆ ಮುಖಾಮುಖಿ ಚರ್ಚೆ ನಡೆಸಲು ಪಂಥಾಹ್ವಾನ ನೀಡಿದ್ದಾರೆ.

ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಮೋದಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದು, ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತು ಆರಂಭಿಸಿರುವುದು ನನಗೆ ಸಂತೋಷವಾಗಿದೆ. ಈ ಕುರಿತು ಚರ್ಚಿಸಲು ಅವರಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇನೆ ಎಂದಿದ್ದಾರೆ.

ನನ್ನ ಈ ಪ್ರಶ್ನೆಗಳಿಂದಲೇ ಚರ್ಚೆ ಆರಂಭವಾಗಲಿ ಎಂದು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ. ಲೋಕಪಾಲ್‌ ನೇಮಕ ಕುರಿತು. ಜಡ್ಜ್‌  ಲೋಯಾ ಸಾವಿನ ಪ್ರಕರಣದ ತನಿಖೆ ಕುರಿತು. ಅಮಿತ್ ಶಾ ಪುತ್ರ ಜೈ ಶಾ ಆಸ್ತಿ ಹೆಚ್ಚಳ ಕುರಿತು. ಕಳಂಕರ ಹಿತ ಸಿಎಂ ಅಭ್ಯರ್ಥಿಗಳ ನೇಮಕ ಕುರಿತು ಚರ್ಚೆ ಮಾಡೋಣ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com