Shocking : ಕುಡಿದ ನಶೆಯಲ್ಲಿ ಮನೆಗೆ ಬಂದ ಮಗ ಹೆತ್ತಮ್ಮನಿಗೆ ಮಾಡಿದ್ದೇನು…?

ಬೆಂಗಳೂರು: ತಾಯಿ ದೇವು ಕೊಟ್ಟ ವರ. ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗುವುದಿಲ್ಲ ಎಂದು ಹೇಳುತ್ತಾರೆ. ಅಲ್ಲದೆ ಅದೆಷ್ಟೋ ಮಕ್ಕಳು ತಾಯಿಯ ಪ್ರೀತಿಯಿಂದ ವಂಚಿತರಾಗಿದ್ದಾರೆ. ಆದರೆ ಇಲ್ಲೊಬ್ಬ ಮಗ ಕುಡಿದು ಬಂದು ಹೆತ್ತಮ್ಮನನ್ನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಮುನಿಯಮ್ಮ ಎಂದು ಹೆಸರಿಸಲಾಗಿದೆ. ತಾಯಿಯನ್ನು ಕೊಂದ ಪುತ್ರ ಸಂತೋಷ್‌ ಎಂದು ತಿಳಿದುಬಂದಿದೆ. ಪ್ರತಿನಿತ್ಯ ಸಂತೋಷ್‌ ಕುಡಿದು ಬಂದು ತಾಯಿಗೆ ಹಿಂಸೆ ನೀಡುತ್ತಿದ್ದ. ಅಂತೆಯೇ ಇಂದೂ ಸಹ ಹಾಡಹಗಲೇ ಕುಡಿದು ಬಂದು ತಾಯಿಗೆ ಹಿಂಸೆ ನೀಡಿದ್ದಾನೆ. ಬಳಿಕ ಮರದ ಪೀಸ್‌ನಿಂದ ತಾಯಿಯ ತಲೆಗೆ ಬಡಿದು ಕೊಲೆ ಮಾಡಿದ್ದಾನೆ. ಮಲ್ಲಸಂದ್ರದ ಗುಡ್ಡೆಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿ ಸಂತೋಷ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com