ಮದಕರಿ ವಂಶದಲ್ಲಿ ಹುಟ್ಟಿದ ನಾನು ಪಕ್ಷಕ್ಕೆ ದ್ರೋಹ ಬಗೆಯೋ ಮಾತೇ ಇಲ್ಲ : BJP ನಾಯಕ ಸುರೇಶ್ ಬಾಬು

ಬಳ್ಳಾರಿ :ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನನ್ನ ರಾಜಕೀಯ ಬೆಳವಣಿಗೆ ಆರಂಭವಾಗಿದ್ದು ಬಿಜೆಪಿಯಿಂದ. ನನ್ನ ಕೊನೆಯುಸಿರು  ಇರುವವರೆಗೂ ನಾನು ಬಿಜೆಪಿಯಲ್ಲಿರುತ್ತೇನೆ ಎಂದು ಕಂಪ್ಲಿ ಶಾಸಕ ಸುರೇಶ್‌ ಬಾಬು ಹೇಳಿದ್ದಾರೆ.

ಸುರೇಶ್ ಬಾಬು ಕಾಂಗ್ರೆಸ್‌ ಸೇರ್ಪೆ ವಿಚಾರ ಸಂಬಂಧ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಅವರು,  ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ನನಗೆ ಎರಡು ಕಣ್ಣುಗಳಿದ್ದಂತೆ. ಮದಕರಿ ವಂಶಸ್ಥದಲ್ಲಿ ಹುಟ್ಟಿದ ನಾನು, ಸ್ವಾಮಿ ನಿಷ್ಠೆಯಲ್ಲಿದ್ದೇನೆ. ನಾನು ದ್ರೋಹ ಮಾಡೋಲ್ಲ, ಡಿಕೆ ಶಿವಕುಮಾರ್ ಗೆ ಭಯ ಶುರುವಾಗಿದೆ. ಮನೆಯ ಮೇಲೆ ದಾಳಿಯ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ನವರು ಚಿಲ್ಲರೆ ರಾಜಕಾರಣ ಮಾಡೋದನ್ನು ನಿಲ್ಲಿಸಬೇಕು. ಸುರೇಶ್ ಬಾಬು ಯಾರ ಮನೆಯ ಬಾಗಿಲು ತಟ್ಟಿಲ್ಲ. ತಟ್ಟುವುದೂ ಇಲ್ಲ. ನಮ್ಮ ಮನೆ ಬಾಗಿಲು ಗಟ್ಟಿಯಾಗಿದೆ. ನಾಯಕನಾಗಿ ಹುಟ್ಟಿ ನಾಯಕನಾಗಿಯೇ ಇರುವೆ. ಡಿಕೆಶಿ ಗಿಮಿಕ್ ಪಾಲಿಟಿಕ್ಸ್ ಮಾಡುತ್ತಾರೆ, ಸುರೇಶ್ ಬಾಬುನನ್ನು ಮಾತನಾಡಿಸುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

Leave a Reply

Your email address will not be published.