ಮಹಿಳೆಯ ಕೈ ಕಾಲು ಕಟ್ಟಿದ್ರು, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚೇಬಿಟ್ರು…!!!

ಬಾಗಲಕೋಟೆ : ಬಾಗಲಕೋಟೆಯಲ್ಲಿ ದಾರುಣ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮನೆಯಲ್ಲಿದ್ದ ಮಹಿಳೆಯ ಕೈ ಕಾಲು ಕಟ್ಟಿ ಸೀಮೇಎಣ್ಣೆ ಸುರಿದು ಬೆಂಕಿ ಹಚ್ಚಿ ಮನೆಯಲ್ಲಿದ್ದ 1 ಲಕ್ಷರೂ ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಬಾಗಲಕೋಟೆಯ ನವನಗರದ ವಾಂಬೆ ಕಾಲೊನಿಯಲ್ಲಿ ಘಟನೆ ನಡೆದಿದೆ. ಮೃಚ ಮಹಿಳೆಯನ್ನು ರೂಪಾ ಹಳ್ಳದಮನಿ ಎಂದು ಹೆಸರಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಮೃತ ರೂಪಾ ಪತಿ ಮನೆಯಲ್ಲಿ 1 ಲಕ್ಷ ರೂ ಹಣವನ್ನು ತಂದಿಟ್ಟಿದ್ದ. ಇದನ್ನು ತಿಳಿದ ದುಷ್ಕರ್ಮಿಗಳು ಮಹಿಳೆಗೆ ಬೆಂಕಿ ಹಚ್ಚಿ ಮನೆಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಸಿಪಿಐ ಎಂ.ಎಸ್‌ ತುಳಸಿಗೇರಿ , ಪಿಎಸ್‌ಐ ಸಂತೋಷ್‌ ಹಳ್ಳೂರ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com