ಯೋಗಿ ನೇತೃತ್ವದ ಸರ್ಕಾರದಿಂದ ಜನತೆಗೆ ಗೋಮೂತ್ರ ಔಷಧಿ ಭಾಗ್ಯ…..!!

ಲಖನೌ : ಗೋವುಗಳು ಹಾಗೂ ಗೋಮೂತ್ರದಲ್ಲಿರುವ ಔಷಧೀಯ ಗುಣಗಳನ್ನು ಬಳಸಿಕೊಂಡು ಔಷಧಗಳ ತಯಾರಿಕೆ ಮಾಡುವಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಯುರ್ವೇದ ಇಲಾಖೆಯು ಗೋಮೂತ್ರದಿಂದ 8 ಔಷಧಗಳನ್ನು ತಯಾರಿಸಿದೆ.
ಈ ಔಷಧಗಳು ಯಕೃತ್‌ ಸಮಸ್ಯೆ, ಕೀಲು ನೋವು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಔಷಧಗಳಾಗಿದ್ದು, ಲಖನೌ ಹಾಗೂ ಫಿಲಿಬಿತ್‌ನಲ್ಲಿ ಎರಡು ಫಾರ್ಮಸಿಗಳು ಹಾಗೂ ಕೆಲ ಖಾಸಗಿ ಘಟಕಗಳನ್ನು ಹೊಂದಿದೆ. ಈ ಫಾರ್ಮಸಿಗಳು ಗೋಮೂತ್ರ , ಗೋವಿನ ಹಾಲು ಹಾಗೂ ತುಪ್ಪದಿಂದ ವಿವಿಧ ಔಷಧಗಳ ತಯಾರಿ ನಡೆಸುತ್ತಿರುವುದಾಗಿ ಇಲಾಖಾ ನಿರ್ದೇಶಕ ಆರ್‌. ಆರ್‌ ಚೌಧರಿ ಹೇಳಿದ್ದಾರೆ.
ಅಲ್ಲದೆ ಗೋಮೂತ್ರದಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಇದು ಆಯುರ್ವೇದದ ಅವಿಭಾಜ್ಯ ಅಂಗ. ಈಗಾಗಲೆ 8 ರೀತಿಯ ಔಷಧಗಳನ್ನ ತಯಾರಿಸಿದ್ದು, ಇದನ್ನು ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದ್ದು, ಇದಕ್ಕಾಗಿ ವಿಶೇಷ ಅಧ್ಯಯನ ಕೇಂದ್ರ ಸ್ಥಾಪಿಸುವುದಾಗಿಯೂ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com