ಮೋದಿ ಪ್ರಾಮಿಸ್‌ ಟೂತ್‌ ಪೇಸ್ಟ್‌, ಜನರ ಮುಖದಲ್ಲಿ ನಗು ತರಲು ವಿಫಲವಾಗಿದೆ : ಪ್ರಕಾಶ್ ರೈ

ಬೆಂಗಳೂರು : ಪ್ರಧಾನಿ ಮೋದಿ ವಿರುದ್ದ ನಟ ಪ್ರಕಾಶ್‌ ರೈ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರ ಭರವಸೆ ಪ್ರಾಮಿಸ್‌ ಟೂತ್‌ಪೇಸ್ಟ್‌ನ ಹಾಗೆ. 2014ರಲ್ಲಿ ಮಾರಾಟವಾದ ಪ್ರಾಮಿಸ್‌ ಟೂತ್‌ ಪೇಸ್ಟ್‌ನಿಂದ ತೊಂದರೆಯಾಗಿ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ಮೂಡಿಸಲು ವಿಫಲವಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
2014ರಲ್ಲಿ ಮಾರಾಟವಾದ ಪ್ರಾಮಿಸ್ ಟೂತ್‌ ಪೇಸ್ಟ್‌ ಹಲ್ಲುಜ್ಜಲು ಮರೆತುಬಿಟ್ಟಿದೆ. ನನ್ನ ದೇಶದ ತೊಂದರೆಗೊಳಗಾದ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ತರಿಸಲು ವಿಫಲವಾಗಿದೆ. ನಿನ್ನೆ ಕರ್ನಾಟಕ ರ್ಯಾಲಿಯಲ್ಲಿ ಮಾರಾಟ ಮಾಡಲಾದ ಪ್ರಾಮಿಸ್‌ ಟೂತ್‌ಪೇಸ್ಟ್‌ನಲ್ಲಿ ನಿಮಗೆ ನಂಬಿಕೆ ಇದೆಯೇ ?ನೀಡಿದ್ದ ಭರವಸೆಗಳನ್ನು ಅದು ಈಡೇರಿಸುತ್ತದೆಯೇ. ಇದೆಲ್ಲ ಕೇಳಿದ್ದು ಸುಮ್ಮನೆ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.