ಶಾಸಕ ಇಕ್ಬಾಲ್ ಅನ್ಸಾರಿ ಮೇಲೆ ಚೊಂಬು, ಚಪ್ಪಲಿ ಬೀಸಿದ ಮಹಿಳೆಯರು…!!

ಕೊಪ್ಪಳ : ಇತ್ತೀಚೆಗೆ ಶಾಸಕ ಇಕ್ಬಾಲ್ ಅನ್ಸಾರಿ ಇತ್ತೀಚೆಗೆ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ನಿನ್ನೆ ರಾತ್ರಿ ಕೊಪ್ಪಳದ ಗಂಗಾವತಿಯಲ್ಲಿ ಮಹಿಳೆಯರು ಶಾಸಕ ಇಕ್ಬಾಲ್ ಅನ್ಸಾರಿ ಕಡೆಗೆ ತೊಂಬು, ಚಪ್ಪಲಿ ಎಸೆದಿರುವ ಘಟನೆ ನಡೆದಿದ್ದು, ಅನ್ಸಾರಿ ಭಾರೀ ಮುಜುಗರ ಅನುಭವಿಸುವಂತಾಗಿದೆ.

ಶಾಸಕರು ವಾರ್ಡ್ ವೀಕ್ಷಣೆಗೆ ಹೋಗಿದ್ದ ವೇಳೆ ಗಂಗಾವತಿಯ 28ನೇ ವಾರ್ಡ್ ನಲ್ಲಿ ಮಹಿಳೆಯರು ಘೇರಾವ್ ಹಾಕಿ, ಪ್ರತಿಭಟಿಸಿದ್ದಾರೆ. ವಾರ್ಡ್ ನಲ್ಲಿ ಸಮರ್ಪಕ ಶೌಚಾಲಯ ವ್ಯವಸ್ಥೆ ಇಲ್ಲದ್ದರಿಂದ ಆಕ್ರೋಶಗೊಂಡ ಸುಮಾರು 200 ಮಹಿಳೆಯರು ತೊಂಬು ಹಿಡಿದು ಬಂದು ಅನ್ಸಾರಿ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದವೂ ನಡೆದಿದೆ. ಈ ವೇಳೆ ಕೆಲವರು ಶಾಸಕರ ಕಡೆಗೆ ತೊಂಬು ಮತ್ತು ಚಪ್ಪಲಿ ಎಸೆದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ, ಶಾಸಕ ಇಕ್ಬಾಲ್ ಅನ್ಸಾರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com