Cricket U-19 : ಭಾರತ ವಿರುದ್ಧ ಪಾಕ್‌ ಸೋಲಿಗೆ ಮಾಟ-ಮಂತ್ರ ಕಾರಣವಂತೆ ! ಹೀಗಂದಿದ್ಯಾರು ?

ಇಸ್ಲಾಮಾಬಾದ್‌ : ಅಂಡರ್‌ 19 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಆಡಿತ್ತು. ಪಂದ್ಯದಲ್ಲಿ ಸೋತು ತವರಿಗೆ ಮರಳಿರುವ ಪಾಕಿಸ್ತಾನ ತಂಡದ ಮ್ಯಾನೇಜರ್‌ ನದೀಂಖಾನ್‌ ಹೇಳಿಕೆಯೊಂದನ್ನು ನೀಡಿ ನಗೆ ಪಾಟಲಿಗೀಡಾಗಿದ್ದಾರೆ.
ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡ ಸೋತಿದ್ದಕ್ಕೆ ಮಾಟ ಮಂತ್ರ ಕಾರಣ. ಅಂಡರ್‌ 19 ವಿಶ್ವಕರ್‌ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸೋಲಲು ಭಾನಾಮತಿ ಪ್ರಯೋಗ ಮಾಡಲಾಗಿದೆ. ಇಲ್ಲದಿದ್ದರೆ ಭಾರತ ತಂಡ ಆ ರೀತಿ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ಭಾರತ ತಂಡದ ವಿರುದ್ಧ ನಮ್ಮ ತಂಡ ಎಂದೂ ಹೀಗೆ ಆಡಲು ಸಾಧ್ಯವಿಲ್ಲ. ನಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಭಾರತ ನೀಡಿದ್ದ ಟಾರ್ಗೆಟ್‌ಗೆ ಕೊನೆಯವರೆಗೂ ನಾವು ಗೆಲ್ಲುತ್ತೇವೆಂಬ ನಂಬಿಕೆ ಇತ್ತು. ಆದರೆ ನಮ್ಮ ತಂಡ ಕೇವಲ 69 ರನ್‌ ಹೊಡೆದಿದ್ದನ್ನು ನೋಡಿದರೆ ಅನುಮಾನ ವ್ಯಕ್ತವಾಗುತ್ತಿದೆ. ನಮ್ಮ ಆಟಗಾರರು ಬ್ಲಾಂಕ್ ಆಗಿದ್ದರು. ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನೇ ಕಳೆದುಕೊಂಡಂತಿತ್ತು ಎಂದಿದ್ದಾರೆ.
ತಂಡದ ಕಳಪೆ ಆಟದ ಬಗ್ಗೆ ನದೀಂ ಖಾನ್‌ ಸಮರ್ಥಿಸಿಕೊಂಡ ವಿಚಾರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ತಮ್ಮ ತಂಡದ ಸೋಲಿಗೆ ಕಾರಣ ಹುಡುಕಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಬಿಟ್ಟು ಈ ರೀತಿಯ ಹೇಳಿಕೆ ನೀಡುತ್ತಿರುವುದು ಕ್ರಿಕೆಟ್ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನ ಮಾಧ್ಯಮಗಳು ಹೇಳುತ್ತಿವೆ.

Leave a Reply

Your email address will not be published.

Social Media Auto Publish Powered By : XYZScripts.com