ಅಪ್ಪಾ… ನನಗೆ ಉಸಿರು ಕಟ್ಟುತ್ತಿದೆ.. ನನ್ನ ಬಳಿಯೇ ಇರು ಎನ್ನುತ್ತಲೇ ಪ್ರಾಣಬಿಟ್ಟ 3 ವರ್ಷದ ಮಗು

ಚಂಡೀಗಢ : 3 ವರ್ಷದ ಮಗುವೊಂದು ತಂದೆಯ ಎದುರೇ ಉಸಿರುಗಟ್ಟಿ ಸಾವಿಗೀಡಾದ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನಡೆದಿದೆ.

ಮೃತ ಬಾಲಕಿ ವಂಶಿಕಾಗೆ ಅಂಗಡಿಯವನೊಬ್ಬ ಇಂಜೆಕ್ಷನ್‌ ನೀಡಿದ್ದು, ಈ ಇಂಜೆಕ್ಷನ್‌ನಿಂದ ರಿಯಾಕ್ಷನ್ ಆಗಿ ಬಳಿಕ ಮಗುವಿಗೆ ಉಸಿರುಗಟ್ಟಲು ಪ್ರಾರಂಭವಾಗಿದೆ. ಕೂಡಲೆ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ದವಾಗುತ್ತಿದ್ದಂತೆ ಮಗು, ತನ್ನನ್ನು ಬಿಟ್ಟು ಎಲ್ಲೂ ಹೋಗಬೇಡ. ನನಗೆ ಉಸಿರು ಕಟ್ಟುತ್ತಿದೆ ಎಂದಿದೆ. ಇದರಿಂದ ಗಾಬರಿಯಾದ ಅಪ್ಪ, ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಮಗು ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಅಂಗಡಿಯವನ ವಿಚಾರಣೆ ನಡೆಸಿದಾಗ ಆತ ಯಾವುದೇ ಡಿಗ್ರಿ ಪಡೆಯದೆ ಮೆಡಿಕಲ್‌ ಶಾಪ್‌ನಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದು, ಮಗುವಿಗೆ ಆರೋಗ್ಯ ಸರಿಯಿರದ ಹಿನ್ನೆಲೆಯಲ್ಲಿ ಝೆಂಟಾಮೈಸಿನ್ ಇಂಜೆಕ್ಷನ್‌ ನೀಡಿದ್ದಾನೆ.

ಇಂಜೆಕ್ಷನ್‌ ಪಡೆದ ಕೆಲವೇ ಗಂಟೆಯಲ್ಲಿ ಮಗುವಿಗೆ ಉಸಿರುಗಟ್ಟಲು ಪ್ರಾರಂಭವಾಗಿದೆ. ಬಳಿಕ ತಂದೆಯ ಎದುರೇ ಮಗು ಪ್ರಾಣ ಬಿಟ್ಟಿದೆ. ಮೆಡಿಕಲ್‌ ಶಾಪ್‌ ಸೇಲ್ಸ್‌ ಮನ್‌ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com