ಮತ್ತೆ ಚೀನಾ ಪುಂಡಾಟ : ಗಡಿ ಬಳಿ ಭಾರೀ ಪ್ರಮಾಣದ ವಾಯು ಸೇನೆ ನಿಯೋಜನೆ !

ದೆಹಲಿ : ಡೋಕ್ಲಾಂ ವಿವಾದ ಶಾಂತಿಯುತವಾಗಿ ಪರಿಹಾರ ಕಂಡ ಬಳಿಕ ಚೀನಾ ಮತ್ತೆ ತನ್ನ ಕುತಂತ್ರಿ ಬುದ್ದಿಯನ್ನು ಮುಂದುವರಿಸಿದೆ. ಸ್ಪಲ್ಪ ದಿನಗಳವರೆಗೆ ಶಾಂತವಾಗಿದ್ದ ಚೀನಾ ಈಗ ಮತ್ತೆ ಡೋಕ್ಲಾಂ ಗಡಿಯಲ್ಲಿ ತನ್ನ ವಾಯುಸೇನೆಯನ್ನು ನಿಯೋಜಿಸಿದೆ.

ಚೀನಾ-ಟಿಬೆಟ್‌ ಗಡಿ ಪ್ರದೇಶದಲ್ಲಿ ವಿಮಾನ ಹಾರಾಟ ನಿಷೇಧಿಸಿದ್ದರೂ ಚೀನಾ, ಎಂದಿಗಿಂತ ಹೆಚ್ಚು ಅಂದರೆ ಒಟ್ಟು 51 ಫೈಟರ್‌ ಜೆಟ್‌ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದು, ಲಾಸಾ ಗೊಂಗರ್‌ ಪ್ರದೇಶದಲ್ಲಿ ಎಂಟು ಫೈಟರ್‌ ಜೆಟ್‌ಗಳನ್ನು ಸನ್ನದ್ದ ಸ್ಥಿತಿಯಲ್ಲಿ ನಿಲ್ಲಿಸಿದೆ. ಜೊತೆಗೆ 22 ಎಂಐ ಯುದ್ಧ ವಿಮಾನ, ಏರ್‌ ಮಿಸೈಲ್ಸ್‌ ವ್ಯವಸ್ಥೆಯನ್ನು ರೆಡಿಯಾಗಿಟ್ಟುಕೊಂಡಿದೆ.

ಇನ್ನು ರಿಕಜೆ ಪ್ರದೇಶದಲ್ಲಿ 17 ಯುದ್ದ ವಿಮಾನ, 11 ಎಂಐ-17 ಮಾನವ ರಹಿತ ವಿಮಾನ, ಸಿಕ್ಕಿಂ ವಲಯದಲ್ಲಿ ಏರ್‌ ಜೆಟ್‌ಗಳನ್ನು ಜಮಾವಣೆಗೊಳಿಸಿದೆ.

ಈ ಮೂಲಕ ತನ್ನ ಸೈನ್ಯದ ಬಲ ಎಷ್ಟೆಂಬುದನ್ನು ಜಗಜ್ಜಾಹಿರು ಮಾಡಲು ಚೀನಾ ಮುಂದಾಗಿದ್ದು, ಅಮೆರಿಕ ಶೀತಲ ಸಮರ ಮನಸ್ಥಿತಿಯನ್ನು ಬಿಟ್ಟು, ಯಾರನ್ನೂ ಕೀಳಾಗಿ ನೋಡದಂತೆ ಎಚ್ಚರಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ.

ಇತ್ತೀಚೆಗೆ ಅಮೆರಿಕ ತನ್ನಲ್ಲಿರುವ ಅಣ್ವಸ್ತ್ರ ಬಲ ಪ್ರದರ್ಶನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಚೀನಾ ಅಮೆರಿಕಕ್ಕೆ ತಿರುಗೇಟು ನೀಡಲು ಈ ರೀತಿ ಮಾಡುತ್ತಿರುವುದಾಗಿ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com