ಕೆಲಸವಿಲ್ಲದೆ ಕೂರೋದಕ್ಕಿಂತ ಪಕೋಡಾ ಮಾರೋದು ವಾಸಿ : ಮೋದಿ ಹೇಳಿಕೆಗೆ ಶಾ ಸಮರ್ಥನೆ

ದೆಹಲಿ : ಪ್ರಧಾನಿ ಮೋದಿಯವರ ಪಕೋಡಾ ವ್ಯಾಪಾರ ಹೇಳಿಕೆಯ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವುದರ ಮಧ್ಯೆ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಈ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಸಭಾ ಸದಸ್ಯರಾದ ಬಳಿಕ ಮೊದಲ ಬಾರಿಗೆ ಮಾತನಾಡಿರುವ ಅಮಿತ್ ಶಾ, ಜನ ಏನೂ ಕೆಲಸವಿಲ್ಲದೆ ಸುಮ್ಮನೆ ಕೂರುವುದಕ್ಕಿಂತ ಪಕೋಡಾ ಮಾರುವುದು ಲೇಸು. ಇದರಲ್ಲಿ ತಪ್ಪೂ ಇಲ್ಲ, ಅವಮಾನವೂ ಇಲ್ಲ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿರುವ ಶಾ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದಿನಿಂದಲೂ ಇತ್ತು. 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ನಿರುದ್ಯೋಗ ಹೊಡೆದೋಡಿಸಲು ಏನು ಮಾಡಿತ್ತು ಎಂದು ಪ್ರಶ್ನಿಸಿದ್ದಾರೆ. ದೇಶದ ಯುವಜನತೆಗೆ ಹೊಸ ಉದ್ಯೋಗ ಸೃಷ್ಠಿ ಮಾಡಲು ಸರ್ಕಾರ ಶ್ರಮ ವಹಿಸುತ್ತಿದೆ. ಈ ಹಿಂದಿದ್ದ ಸರ್ಕಾರ ಬಡತನ ನಿರ್ಮೂಲನೆ ಮಾಡುತ್ತೇವೆಂದು ಹೇಳುತ್ತಾ 60 ವರ್ಷವಾಯಿತು. ಆದರೂ ಏನೂ ಆಗಿಲ್ಲ. ಆದರೆ ಈಗ ಬಡತನ ನಿರ್ಮೂಲನೆಯಾಗುತ್ತಿದೆ. ಉದ್ಯೋಗ ಸೃಷ್ಠಿ ಬಗ್ಗೆ ಸರ್ಕಾರ ಜಾಗೃತವಾಗಿದೆ. ಆದರೆ ಒಮ್ಮೆಲೆ ಬದಲಾವಣೆ ಸಾಧ್ಯವಿಲ್ಲ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com