ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದೇ ತಪ್ಪಾಯ್ತು…ಈ ಯುವಕನಿಗೆ ಆದ ಗತಿಯೇನು ?

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ದುರಂತವೊಂದು ನಡೆದಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಯುವತಿಯ ಕುಟುಂಬಸ್ತರು ಯುವಕನನ್ನು ನಡು ರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.

ಮೃತ ಯುವಕನನ್ನು ಅಂಕಿತ್‌ (23) ಎಂದು ಹೆಸರಿಸಲಾಗಿದೆ. ಈತ ಸಲೀಮಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಮನೆಯವರ ವಿರೋಧವಿತ್ತು. ಆದ ಕಾರಣ ಅಂಕಿತ್‌ನನ್ನು ಸಲೀಮಾ ಪೋಷಕರೇ ನಡು ರಸ್ತೆಯಲ್ಲಿ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.

ಈ ಕುರಿತು ಸಲೀಮಾ ಹೇಳಿಕೆ ನೀಡಿದ್ದು, ನಾವಿಬ್ಬರು ಮದುವೆಯಾಗುವ ನಿರ್ಧಾರ ಮಾಡಿದ್ದೆವು. ಅಷ್ಟರಲ್ಲಾಗಲೇ ನನ್ನ ಪೋಷಕರು ಆತನನ್ನು ಕೊಲೆ ಮಾಡಿದ್ದಾರೆ. ಇದಕ್ಕೆಲ್ಲ ನನ್ನ ಮಾವನೇ ಕಾರಣ. ನಾನು ಮನೆಗೆ ಹೋಗುವುದಿಲ್ಲ. ನನ್ನನ್ನು ಕೊಲ್ಲುತ್ತಾರೆ ಎಂಬ ಭಯವಿರುವುದಾಗಿ ಹೇಳಿದ್ದಾಳೆ.

ಈ ಮಧ್ಯೆ ಸಲೀಮಾ ಕುಟುಂಬಸ್ಥರು ಕೊಲೆ ಬಳಿಕ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com