ಏನೇ ಆದ್ರು ಮೋದಿ ನಮ್ಮ ಪ್ರಧಾನಿ, ಅವರಿಗೆ ಗೌರವ ಕೊಡ್ಬೇಕು : ರಮ್ಯಾಗೆ ಜಮೀರ್‌ ಬುದ್ದಿವಾದ

ಬೆಂಗಳೂರು : ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮದ ವೇಳೆ ಮೋದಿ TOP ಹೇಳಿಕೆಗೆ ಕಾಲೆಳೆದಿದ್ದ ರಮ್ಯಾ ಅವರ ವಿರುದ್ದ ಶಾಸಕ ಜಮೀರ್‌ ಅಹಮದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ನಮ್ಮ ದೇಶದ ಪ್ರಧಾನಿ. ಅವರಿಗೆ ಯಾರೇ ಆದರೂ ಗೌರವ ನೀಡಬೇಕು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಜೊತೆಗೆ ಮೋದಿ ಕೇವಲ ರಾಜಕೀಯ ಭಾಷಣ ಮಾಡಿ ಹೋಗಿದ್ದಾರೆ. ಮಹದಾಯಿ ಬಗ್ಗೆ ಒಂದೇ ಒಂದು ಶಬ್ದವನ್ನೂ ಮಾತನಾಡಿಲ್ಲ. ಯಡಯೂರಪ್ಪ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾರ ಭ್ರಷ್ಟಾಚಾರ ಎಂಬುದು ಗೊತ್ತಿಲ್ಲ. ಯಡಿಯೂರಪ್ಪ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರು, ಆದರೆ ಸಿದ್ದರಾಮಯ್ಯ ಹಾಗೆ ಮಾಡಿಲ್ಲ. ಮೋದಿ ಆರೋಪಕ್ಕೆ ದಾಖಲೆ ಕೊಡಲಿ. ಆಮೇಲೆ ಮುಂದಿನ ವಿಚಾರ ನೋಡೋಣ ಎಂದಿದ್ದಾರೆ.

Leave a Reply

Your email address will not be published.