ಬಸ್‌ನಡಿ ಶವ ಎಳೆದು ತಂದಿದ್ದ ಪ್ರಕರಣ : ಪೊಲೀಸರ ಕಣ್ತಪ್ಪಿಸಲು ಡಿಪೋದಲ್ಲಿ ಶವ ಎಸೆದ ಚಾಲಕ !!

ಬೆಂಗಳೂರು : ಬಸ್‌ನಡಿ ಶವ ಎಳೆದು ತಂದಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ. ಪೊಲೀಸ್‌ ವಿಚಾರಣೆ ವೇಳೆ ಚಾಲಕ ತಪ್ಪೊಪ್ಪಿಕೊಂಡಿದ್ದು. ತಾನೇ ಅಪಘಾತ ಮಾಡಿ ಬಸ್‌ ನಿಲ್ಲಿಸದೇ ಬಂದಿರುವುದಾಗಿ ಹೇಳಿದ್ದಾನೆ.
ಶಾಂತಿನಗರ ಒಂದನೇ ಡಿಪೋದಲ್ಲಿ ಬಸ್‌ನ ಚಕ್ರದಡಿ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿತ್ತು. ಈ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ನಡೆಸುವ ವೇಳೆ ಚಾಲಕ ತಾನೇ ತಪ್ಪೆಸಗಿರುವುದಾಗಿ ಹೇಳಿದ್ದಾನೆ. ಅಪಘಾತವಾದ ಬಳಿಕ ಬಸ್ ನಿಲ್ಲಿಸದೇ ಚಾಲಕ ಮೊಯಿನುದ್ದೀನ್‌ ಬಸ‌ ಚಲಾಯಿಸಿಕೊಂಡು ಬಂದಿದ್ದಾನೆ. ಈ ಬಗ್ಗೆ ಆತ ಬಾಯ್ಬಿಟ್ಟಿದ್ದು, ಅಪಘಾತ ಮಾಡಿದ್ದು ನಾನ. ಬಸ್‌ ನಿಲ್ಲಿಸದೆ ಹಾಗೇ ಬಂದೆ. ಪೊಲೀಸರಿಗೆ ಭಯಪಟ್ಟು ಈ ರೀತಿಯ ಕೆಲಸ ಮಾಡಿದ್ದೆ ಎಂದಿದ್ದಾನೆ.
ರಾತ್ರಿ 12.30ರ ಸುಮಾರಿಗೆ ರಾಮನಗರ, ಚೆನ್ನಪಟ್ಟಣ ಮಧ್ಯೆ ಅಪಘಾತ ನಡೆದಿದೆ. ಈ ವೇಳೆ ಚಾಲಕ ಏನೂ ನಡೆದೇ ಇಲ್ಲ ಎಂಬಂತೆ ಬೆಂಗಳೂರಿಗೆ ಬಂದಿದ್ದಾನೆ. ಶಾಂತಿನಗರದಲ್ಲಿ ಪ್ರಯಾಣಿಕರೆಲ್ಲ ಇಳಿದ ಮೇಲೆ ಬಸ್‌ನಡಿ ನೋಡಿದ್ದಾನೆ. ಆಗ ವ್ಯಕ್ತಿಯ ಶವವಿರುವುದು ತಿಳಿದಿದೆ. ವ್ಯಕ್ತಿಯ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದನ್ನು ನೋಡಿ ಬಸ್ಸನ್ನು ಡಿಪೋದೊಳಗೆ ಕೊಂಡೊಯ್ದಿದ್ದಾನೆ. ಆಗ ಶವ ಕೆಳಗೆ ಬಿದ್ದಿದೆ. ಅದನ್ನು ಎರಡು ಬಸ್‌ಗಳ ಮಧ್ಯೆ ಹಾಕಿ ಮನೆಗೆ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೂ ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ರಾತ್ರಿಯಾಗಿದ್ದ ಕಾರಣ ಆತ ಯಾವ ಪ್ರದೇಶದಲ್ಲಿ ಗುದ್ದಿದ್ದಾನೆ ಎಂಬ ಬಗ್ಗೆ ಚಾಲಕನಿಗೂ ಮಾಹಿತಿ ಇಲ್ಲ. ಸದ್ಯ ಚಾಲಕನ ಮೇಲೆ ಪೊಲೀಸರು ಕೇಸ್‌ ದಾಖಲಿಸಿದ್ದು, ವಿಚರಣೆ ಮುಂದುವರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com