Shocking : ಪತ್ನಿ ಹೆಣ್ಣು ಮಗು ಹೆತ್ತಿದ್ದಕ್ಕೆ ಈ ಪತಿರಾಯ ಮಾಡಿದ ಕೆಲಸವೇನು.. ?!

ಹೈದರಾಬಾದ್‌ : ಹೆಣ್ಣು ಮಗು ಹುಟ್ಟಿದರೆ ಮನೆಗೆ ಅದೃಷ್ಟ ಲಕ್ಷ್ಮಿ ಬಂದಳೆಂದು ಜನ ಸಂತೋಷ ಪಡುತ್ತಾರೆ. ಆದರೆ ಆಂಧ್ರ ಪ್ರದೇಶದಲ್ಲೊಬ್ಬ ಟೆಕ್ಕಿ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಪತ್ನಿಗೆ ಕರೆಂಟ್‌ ಶಾಕ್‌ ನೀಡಿ ಕೊಲೆಗೆ ಯತ್ನಿಸಿದ್ದಾನೆ.

ಆರೋಪಿ ಪತಿಯನ್ನು ರಾಜರತ್ನಂ ಎಂದು ಹೆಸರಿಸಲಾಗಿದೆ. ಈ ಬಗ್ಗೆ ರಾಜರತ್ನಂ ಪತ್ನಿ ಪ್ರಶಾಂತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲ ವರ್ಷಗಳ ರಾಜರತ್ನಂ ಹಾಗೂ ಪ್ರಶಾಂತಿ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೆ ಒಂದು ಗಂಡು ಮಗು ಇದ್ದು, ಜನವರಿ 28ರಂದು ಎರಡನೇ ಮಗು ಜನಿಸಿದೆ. ಆದರೆ ಇದು ಪತಿಗೆ ಇಷ್ಟವಿಲ್ಲದ ಕಾರಣ ಪ್ರಶಾಂತಿಗೆ ಪದೇ ಪದೇ ವರದಕ್ಷಿಣೆ ಹಣ ತರುವಂತೆ ಪೀಡಿಸುತ್ತಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ. ಈತ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಅಲ್ಲದೆ ಆತ ಪತ್ನಿ ಮಲಗಿದ್ದ ವೇಳೆ ಆಕೆಯ ಕೈಗೆ ವೈರ್‌ ಸುತ್ತಿ ಕರೆಂಟ್ ಶಾಕ್‌ ನೀಡಲು ಯತ್ನಿಸಿದ್ದ. ಆದರೆ ಪ್ರಶಾಂತಿ ಎಚ್ಚರಕೊಂಡು ಅನಾಹುತದಿಂದ ತಪ್ಪಿಸಿಕೊಂಡಿದ್ದಾಳೆ.ಅಲ್ಲದೆ ಸಾವಿನಿಂದ ತಪ್ಪಿಸಿಕೊಂಡ ಪ್ರಶಾಂತಿ ಮೇಲೆ ಪತಿ ಹಲ್ಲೆ ಮಾಡಿದ್ದು, ಮುಖ, ಕುತ್ತಿಗೆ, ಕೈ ಭಾಗಕ್ಕೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published.