ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯನ್ನು ಕೊಂದೇ ಬಿಟ್ಟ ಮಾಲೀಕ…!!

ಥಾಣೆ : ಕೇವಲ ಒಂದೇ ಒಂದು ರುಪಾಯಿಗಾಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಮಹರಾಷ್ಟ್ರದ ಕಲ್ಯಾಣ ನಗರದಲ್ಲಿ ನಡೆದಿದೆ.

ಮೃತನನ್ನು ಮನೋಹರ್‌ ಗಾಮ್ನೆ (54) ಎಂದು ಗುರುತಿಸಲಾಗಿದೆ. ಮನೆಯ ಹತ್ತಿರವಿರುವ ಅಂಗಡಿಯಲ್ಲಿ ಮನೋಹರ್ ಮೊಟ್ಟೆ ಖರೀದಿಸಲು ಹೋಗಿದ್ದಾನೆ. ಮೊಟ್ಟೆ ಖರೀದಿಸಿದ ಬಳಿಕ ಅಂಗಡಿಯವನಿಗೆ 1 ರೂಪಾಯಿ ಕಡಿಮೆ ನೀಡಿದ್ದಾನೆ. ಇದರಿಂದ ಅಂಗಡಿಯ ಮಾಲೀಕ ಮನೋಹರ್‌ ಜೊತೆ 1 ರೂ ನೀಡುವಂತೆ ಜಗಳ ಮಾಡಿದ್ದಾನೆ.

ಜಗಳ ವಿಕೋಪಕ್ಕೆ ತಿರುಗಿದ್ದು, ಅಂಗಡಿ ಮಾಲೀಕ ಮನೋಹರ್‌ಗೆ ಕಾಲಿನಿಂದ ಒದ್ದಿದ್ದಾನೆ. ಬಳಿಕ ಆತನ ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಹಲ್ಲೆಗೊಳಗಾದ ಮನೋಹರ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಹಿರಿಯ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಆರೋಪಿ ಸುಧಾಕರ್‌ ಪ್ರಭು (45) ಎಂಬಾತನನ್ನು ಬಂಧಿಸಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com