2019 ರಲ್ಲಿ ರಾಹುಲ್ ಗಾಂಧಿ ಭಾರತದ ಪ್ರಧಾನಿ ಆಗಲಿದ್ದಾರೆ : ಎಸ್ ಆರ್ ಪಾಟೀಲ್

‘ 2018 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. 2019 ಕ್ಕೆ ರಾಹುಲ್ ಗಾಂಧಿ ಈ ದೇಶದ ಪ್ರಧಾನಿ ಆಗಲಿದ್ದಾರೆ ‘ ಎಂದು ಹುಬ್ಬಳ್ಳಿಯ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

‘ ಈ ಬಾರಿಯ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ನೋಡಿದ್ರೇ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸುತ್ತೆ. ಐದು ಬಾರಿ ಕಾಂಗ್ರೆಸ್ ಸೋತಿದ್ದರು, ಈ ಸಾರಿ ಬಿಜೆಪಿ‌ ಸೋಲಿಸ್ತೀರಿ. ಈ ಸಾರಿ‌ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಒಳ್ಳೇ ಆಡಳಿತ ನೀಡಿದಾರೆ. ಈ ಸಾರಿ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ನಿಶ್ಚಿತ.

ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಈ ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ. ಆಕಾಂಕ್ಷೆಗಳು ಈ ಕ್ಷೇತ್ರದಲ್ಲಿ ಹೆಚ್ಚಿದಾರೆ. ಆದ್ರೇ, ಯಾರಿಗೆ ಟಿಕೆಟ್ ಸಿಕ್ರೂ ಕಾಂಗ್ರೆಸ್ ಗೆಲ್ಲಿಸೋಕೆ ಶ್ರಮಿಸಿ. ಈ ಸಾರಿ ವಾತಾವರಣ ಕಾಂಗ್ರೆಸ್ ಪರವಾಗಿದೆ. ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದ ಎಲ್ಲ ಕಡೆ ತಿರುಗಿದ್ದೇನೆ.

ಜನರ ಕಾಂಗ್ರೆಸ್ ಪರವಾಗಿ ಒಲವು ವ್ಯಕ್ತಪಡಿಸ್ತಿದಾರೆ. ಧಾರವಾಡ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯ ಸಾಧಿಸುತ್ತೆ. ನಾವು ೧೬೫ ಭರವಸೆಯನ್ನೂ ನಾವು ಈಡೇರಿಸಿದ್ದೇವೆ. ಮಾತು ಕೊಟ್ಟಂತೆ ನೂರಾರು ಕಾರ್ಯಕ್ರಮ ನೀಡಿದ್ದೇವೆ.

ಅನ್ನಭಾಗ್ಯ ಯೋಜನೆ ನಿಜಕ್ಕೂ ರಾಜ್ಯದ ಜನರ ಹಸಿವು ನೀಗಿಸಿದೆ. ರಾಜ್ಯದ ಜನ ಒಂದಿಲ್ಲ ಒಂದು ಯೋಜನೆಯ ಫಲಾನುಭವಿಗಳು ಇದ್ದಾರೆ. ಆರೋಗ್ಯ ವಿಮೆ ಕೊಡೋದಕ್ಕೂ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಿಜೆಪಿ ಅತ್ಯಂತ ಭ್ರಷ್ಟ ಸರ್ಕಾರ ಅನ್ನೋದು ಸಾಬೀತಾಗಿದೆ. ಬಿಜೆಪಿ ವಿರೋಧ ಪಕ್ಷ ಆಗದಷ್ಟು ಗೆಲ್ಲೋದಕ್ಕಾಗಲಿಲ್ಲ. ಬಿಎಸ್ ವೈ ಸೇರಿ ಸಚಿವರುಗಳೇ ಜೈಲಿಗೆ ಹೋದರು. ವಿರೋಧ ‌ಪಕ್ಷ ಆಗೋದಕ್ಕೂ ‌ಸಾಧ್ಯವಾಗಲಿಲ್ಲ. ಅದಕ್ಕೇ ಬಿಜೆಪಿ ಭ್ರಷ್ಟಾಚಾರ ವೇ ಕಾರಣ.

ಮೋದಿ ಕಪ್ಪುಹಣವನ್ನ ತರಲೇ ಇಲ್ಲ. ಯುವಕರಿಗೆ ಕೆಲಸವನ್ನೇ ಕೊಡಲಿಲ್ಲ. ಬಡವರು ಕಷ್ಟಪಟ್ಟು ಬ್ಯಾಂಕ್ ಗಳಲ್ಲಿ ಕೂಡಿಟ್ರೇ ಅದನ್ನೂ ಬಿಡಲಿಲ್ಲ. ನೋಟ್ ಬ್ಯಾನ್ ನಿಂದ ೧೦೫ ಜನ ಸತ್ತರು. ದೇಶಕ್ಕೆ ೨೦ ವರ್ಷ ಹಿಂದಕ್ಕೆ ಹೋಗ್ತಿದೆ. ಮೋದಿ ಒಂದೇ ಒಂದು ಭರವಸೆ ಈಡೇರಿಸಲಿಲ್ಲ. ಆದ್ರೇ, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದಿದ್ದಾರೆ.

ಎಲ್ಲರನ್ನೂ ಕಾಂಗ್ರೆಸ್ ಜತೆಗೇ ಕರೆದೊಯ್ಯುತ್ತೆ. ಆದ್ರೇ, ಜಾತಿ ಜಾತಿ , ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚುತ್ತಾರೆ. ಭಾವನೆಗಳನ್ನು ಕೆರಳಿಸಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ. ಆದ್ರೇ, ಕರ್ನಾಟಕದಲ್ಲಿ ಈ ರೀತಿ ಆಟ ನಡೆಯೋದಿಲ್ಲ. ಕರ್ನಾಟಕ ಶರಣರು, ಸಂತರು ಹುಟ್ಟಿದ ಪುಣ್ಯ ಭೂಮಿ. ಮಹದಾಯಿಯಲ್ಲಿ ಬಿಜೆಪಿ ಬರೀ ರಾಜಕೀಯ ಮಾಡ್ತಿದೆ. ಒಕ್ಕೂಟ ‌ವ್ಯವಸ್ಥೆ ಮುಖ್ಯಸ್ಥರಾದ ಮೋದಿ ಮಹದಾಯಿ ‌ವಿವಾದ ಇತ್ಯರ್ಥ ಪಡಿಸ್ತಿಲ್ಲ ‘ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com