ದಲಿತ ಎಂಬ ಪದ ಸಂವಿಧಾನದಲ್ಲಿಲ್ಲ, ಅದನ್ನು ಬಳಸಬೇಡಿ : ಮಧ್ಯಪ್ರದೇಶ ಹೈಕೋರ್ಟ್‌ ಸೂಚನೆ

ಭೋಪಾಲ್‌ : ದಲಿತ ಎಂಬ ಪದ ಸಂವಿಧಾನದಲ್ಲೇ ಇಲ್ಲ. ಅಂತಹ ಪದವನ್ನು ಬಳಸಬೇಡಿ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಡಿಸೆಂಬರ್‌ನಲ್ಲಿ ಗ್ವಾಲಿಯರ್‌ನ ಸಾಮಾಜಿಕ ಕಾರ್ಯಕರ್ತ ಮೋಹನ್‌ ಲಾಲ್‌ ಮೊಹರ್‌ ಎಂಬುವವರು ದಲಿತ ಪದ ಬಳಕೆ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ದಲಿತ ಪದ ಬಳಕೆಗೆ ಬ್ರೇಕ್‌ ಹಾಕಿದೆ.

ದೇಶದ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಎಂಬ ಪದ ಬಳಕೆ ಮಾಡಿಲ್ಲ. ಆದ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಪದವನ್ನು ಅಧಿಕೃತವಾಗಿ ಬಳಕೆ ಮಾಡಕೂಡದು. ಸಂವಿಧಾನದಲ್ಲಿ ಪರಿಶಿಷ್ಟ ಜಾತ ಹಾಗೂ ಪರಿಶಿಷ್ಟ ಪಂಗಡವೆಂದು ಉಪಯೋಗಿಸಲಾಗಿದೆ. ಸರ್ಕಾರಗಳು ಈ ಪದಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಆದೇಶಿಸಿದೆ.

ದಲಿತ ಎಂಬ ಪದ ಅವಹೇಳನಕಾರಿಯಾಗಿದ್ದು, ಮೇಲ್ಜಾತಿಯವರು ಪರಿಶಿಷ್ಟ ವರ್ಗದವರಿಗೆ ಅವಮಾನ ಮಾಡಲು ಈ ಪದವನ್ನು ಬಳಸುತ್ತಿದ್ದಾರೆ. ಅಂಬೇಡ್ಕರ್‌ ಸಂವಿಧಾನದಲ್ಲಿ ಎಲ್ಲಿಯೂ ದಲಿತ ಪದ ಬಳಕೆ ಮಾಡಿಲ್ಲ. ಆದರೆ ವಿನಾಕಾರಣ ಎಲ್ಲಾ ಮಾಧ್ಯಮಗಳು, ಎನ್‌ಜಿಓಗಳು ಸೇರಿದಂತೆ ಅನೇಕರು ಈ ಪದ ಬಳಕೆ ಮಾಡುತ್ತಿದ್ದಾರೆ. ಆದ ಕಾರಣ ಈ ಪದ ಬಳಕೆ ಮಾಡದಂತೆ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ದಲಿತ ಪದ ಬಳಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

Leave a Reply

Your email address will not be published.