ನನಗೆ CM ಆಗುವ ಆಕಾಂಕ್ಷೆಯಿಲ್ಲ, JDS ಪಕ್ಷದ ಅಧಿಕಾರಕ್ಕಾಗಿ ಪ್ರವಾಸ ಮಾಡ್ತಿದೀನಿ : HDK

ಆನೇಕಲ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ‘ ನನಗೆ ಮುಖ್ಯಮಂತ್ರಿಯಾಗಬೇಕೆಂಬ ವೈಯಕ್ತಿಕ ಆಮಿಷವಿಲ್ಲ. ಜೆಡಿಎಸ್ ಅಧಿಕಾರಕ್ಕೆ ತರಬೇಕೆಂಬ ಹಂಬಲಕ್ಕೆ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಅಂದೂ ಸಿಎಂ ಆಗುವ ಇರಾದೆಯಿರಲಿಲ್ಲ ಪರಿಸ್ಥಿತಿಯಿಂದ ಸಿಎಂ ಆದೆ. ಅಂದು ಸಿಎಂ ಆದ್ಮೇಲೆ ಶಾಸಕ್ರ ಬದಲು ಜನ್ರ ಬೆಂಬಲದಿಂದ ಮಾತ್ರ ಅಧಿಕಾರ ಪಡೆದಿದ್ದೆ ‘ ಎಂದು ಹೇಳಿದ್ದಾರೆ.

ಮೋದಿ ಬಗ್ಗೆ ಎಲ್ಲ ಚಾನೆಲ್ ಗಳು ಬೆಳಗ್ಗೆಯಿಂದ ಸುದ್ದಿ ಬರ್ತಿದೆ. ಮೋದಿಯಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ನ್ಯೂಸ್ ಇಲ್ವೇ ಇಲ್ಲ. ದೇವೇಗೌಡ್ರು ಪಿಎಂ ಆದಾಗ ನೀರಾವರಿ ಯೋಜನೆಗಳನ್ನ ಕೊಟ್ಟಿದ್ದು ಬಿಂಬಿಸ್ತಿಲ್ಲ. ಅಮಿತ್ ಷಾ ಭಾಷಣದಂತೆ ರಾಜ್ಯದಲ್ಲಿ ವ್ಯಾಪಾರಕ್ಕೆ ಬಂದಿದ್ದರಂತೆ.

ಮೋದಿ ಹೇಳಿದ್ರು 2014ರಲ್ಲಿ ಉದ್ಯೋಗ ಕೊಡ್ತೀವಿ ಅಂದ್ರು. ಪಕೋಡ ವ್ಯಾಪಾರಕ್ಕೆ ಹಚ್ಚಲು ಡಬಲ್ ಡಿಗ್ರಿ ಮಾಡ್ಬೇಕಾ? ಹೀಗೆ ಎರೆಡೂ ರಾಷ್ಟ್ರೀಯ ಪಕ್ಷಗಳ ಗೊಂದಲ ಬಿಡಿ ‘ ಎಂದು ಕುಮಾರಸ್ವಾಮಿ ವೇದಿಕೆಯಲ್ಲಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com