ಯಾದಗಿರಿ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ : ಪತ್ನಿ, ಪ್ರಿಯಕರನ ಮೇಲೆ ಶಂಕೆ

ಯಾದಗಿರಿ ತಾಲ್ಲೂಕಿನ ನಾಗರಬಂಡೆ ಗ್ರಾಮದಲ್ಲಿ ಘಟನೆ  ಮಾರಾಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಓರ್ವನ ಕೊಲೆ ಮಾಡಲಾಗಿದೆ. ದೇವಪ್ಪ (30 )ಕೊಲೆಯಾದ ದುರ್ದೈವಿಯಾಗಿದ್ದಾನೆ. ದೇವಪ್ಪನ ಕೊಲೆಯ ಹಿಂದೆ ಹೆಂಡತಿಯ ಅನೈತಿಕ ಸಂಬಂಧದ ನೆರಳು ಮೂಡಿದೆ.

ಯಂಕಮ್ಮನೆ ಗಂಡನ ಕೊಲೆ ಮಾಡಿಸಿರುವ ಶಂಕೆ ವ್ಕ್ತವಾಗಿದೆ. ಸ್ಥಳಕ್ಕೆ ಸೈದಾಪುರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಡಾಗ್ ನ್ನು ಕೂಡ ಬಳಕೆ ಮಾಡಿ ಪ್ರಕರಣವನ್ನು ಭೇದಿಸುವ ಪ್ರಯತ್ನ ನಡೆಸಿದ್ದಾರೆ.

ಕೊಲೆಯಾದ ದೇವಪ್ಪನ ಹೆಂಡತಿ ಯಂಕಮ್ಮ ವ್ಯಕ್ತಿವೊರ್ವನ ಜೊತೆಗೆ ಫೋನಿನಲ್ಲಿ ಸಂಭಾಷಣೆ ನಡೆಸಿರುವುದು ಲಭ್ಯವಾಗಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.