ಬಾಲಕಿ Lipstick ಹಚ್ಚಿದ್ದೇ ತಪ್ಪಾಯ್ತು…ಇದನ್ನು ನೋಡಿದ ಅಜ್ಜ ಮಾಡಿದ್ದೇನು…?

ಜೈಪುರ : ಇಂದಿನ ದಿನಮಾನಗಳಲ್ಲಿ ಮಹಿಳೆಯರು ಚೆಂದ ಕಾಣಲು ಲಿಪ್‌ಸ್ಟಿಕ್‌ ಬಳಸುವುದು ಸಾಮಾನ್ಯ ಸಂಗತಿ. ಅಂತೆಯೇ ಬಾಲಕಿಯೊಬ್ಬಳು ತಾನು ಸುಂದರವಾಗಿ ಕಾಣಲೆಂದು ಲಿಪ್‌ಸ್ಟಿಕ್‌ ಹಚ್ಚಿಕೊಂಡಿದ್ದಕ್ಕೆ ಸಿಟ್ಟಿಗೆದ್ದ ಅಜ್ಜ ಮೊಮ್ಮಗಳನ್ನು ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ.

13 ವರ್ಷದ ಬಾಲಕಿಯನ್ನು ಹತ್ಯೆ ಮಾಡಿರುವ ಅಜ್ಜ ಸಲೀಂಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 1 ಲಕ್ಷ ರೂ ದಂಡ ವಿಧಿಸಿದೆ.

2008ರ ಅಕ್ಟೋಬರ್‌ನಲ್ಲಿ ಘಟನೆ ನಡೆದಿತ್ತು. 13 ವರ್ಷದ ಬಾಲಕಿ ನಾಜಮಿನ್‌ , ಲಿಪ್‌ಸ್ಟಿಕ್‌ ಹಚ್ಚಿಕೊಂಡು ದೂರದ ಸಂಬಂಧಿಯಾಗಿದ್ದ ಅಜ್ಜನ ಅಂಗಡಿಗೆ ಹೋಗಿದ್ದಳು. ಆಕೆ ಲಿಪ್‌ಸ್ಟಿಕ್‌ ಹಚ್ಚಿದ್ದನ್ನು ನೋಡಿ ಸಿಟ್ಟಿಗೆದ್ದ ಅಜ್ಜ ಅಂಗಡಿ ಹಿಂದಿದ್ದ ತನ್ನ ಮನೆಯಲ್ಲಿ ಬಾಲಕಿಯನ್ನು ಕೂಡಿ ಹಾಕಿ ಸೀಮೇಎಣ್ಣೆ ಸುರಿದು ಬೆಂಕಿ ಹಚ್ಚಿದ್ದ.  ಅರ್ಧಂಬರ್ಧ ಬೆಂದಿದ್ದ ಬಾಲಕಿಯನ್ನು ಆಸ್ಪತ್ರೆ ಸೇರಿಸಲಾಗಿತ್ತು. ಚಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವಿಗೀಡಾಗಿದ್ದಾಳೆ. ಸಾಯುವ ಮುನ್ನ ಅಜ್ಜನೇ ಈ ಕೆಲಸ ಮಾಡಿದ್ದಾಗಿ ಬಾಲಕಿ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅಜ್ಜನನ್ನು ಬಂಧಿಸಿದ್ದು, ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com