ಮೋದಿ ಎಂಬ ಸಿಂಹ ಬರುತ್ತಿದ್ದಂತೆ ಸಿದ್ದರಾಮಯ್ಯ ಇಲಿಯಾಗಿದ್ದಾರೆ : D.V ಸದಾನಂದಗೌಡ

‘ ಸಿದ್ದರಾಮಯ್ಯಗೆ ಇಳಿಯುತ್ತಿರುವ ಬೆವರು ನಿಲ್ಲಿಸಲು ಆಗುತ್ತಿಲ್ಲ. ಸಿದ್ದರಾಮಯ್ಯ ಮಾಡಿರುವ ಕರ್ಮ,ಅವರನ್ನು ಪಾಪ ಕೂಪಕ್ಕೆ ತಳ್ಳಿದೆ..ಕರ್ನಾಟಕದ ಜನರ ಶಾಪ ಅವರಿಗೆ ತಟ್ಟಿದೆ ‘ ಎಂದು ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

‘ ನೀವು ಕೊಂಡಂಗಿಯಾಗುವ ದಿನ ದೂರವಿಲ್ಲ. ನಿಮ್ಮಪಾಲಿಗೆ ಜನ ವೀರಭದ್ರರಾಗುತ್ತಾರೆ ‘ ಸಿಎಂ ಸಿದ್ದರಾಮಯ್ಯ ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟೀಕೆ ಮಾಡಿದ್ದಾರೆ.

‘ ಪ್ರಧಾನಿ ನರೇಂದ್ರ ಮೋದಿ ಸಿಂಹ. ಆ ಸಿಂಹ ಬರುತ್ತಿದ್ದಂತೆಯೇ ಸಿದ್ದರಾಮಯ್ಯ ಇಲಿಯಾಗಿ ಕೂತಿದ್ದಾರೆ. ಈ ಸಿಂಹದ ಶೌರ್ಯಕ್ಕೆ ಪಾಕಿಸ್ತಾನವೇ ಬಾಲ ಮುದುರಿಕೊಂಡಿದೆ. ಅವರಿಗೆ ಹಿಂದೂ ಯುವಕರ ಹತ್ಯೆ ಮಾಡಿದ ಸಂಘಟನೆಗಳನ್ನು ಬಗ್ಗು ಬಡಿಯುವುದು ಕಷ್ಟವೇನಲ್ಲ. ಸಿದ್ದರಾಮಯ್ಯ ಮೈಯಲ್ಲಿ ಟಿಪ್ಪು ಸುಲ್ತಾನ್ ರಕ್ತ ಹರಿಯುತ್ತಿದೆ. ಸಂತೋಷ್ ನಿಗೆ ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಸಾಯಿಸಿದ್ರು ಎನ್ನುವ ಸಿದ್ದರಾಮಯ್ಯ ಹಾಗೂ ರಾಮಲಿಂಗಾರೆಡ್ಡಿ ಅವರ ಮಗನಿಗೇ ಹೀಗೇ ಸ್ಕ್ರೂಡ್ರ್ಐವರ್ ನಿಂದ ಚುಚ್ಚಿ ಸಾಯಿಸಿದ್ರೆ ಏನು ಮಾಡುತ್ತಿದ್ದಿರಿ. ಬಿಜೆಪಿ,ಆರ್ ಎಸ್ ಎಸ್ ಕಾರ್ಯಕರ್ತ ರೆಲ್ಲಾ ಸಿಂಹದ ಮರಿಗಳು ‘ ಎಂದಿದ್ದಾರೆ.

One thought on “ಮೋದಿ ಎಂಬ ಸಿಂಹ ಬರುತ್ತಿದ್ದಂತೆ ಸಿದ್ದರಾಮಯ್ಯ ಇಲಿಯಾಗಿದ್ದಾರೆ : D.V ಸದಾನಂದಗೌಡ

  • February 5, 2018 at 10:14 AM
    Permalink

    ಇಲಿಯಾಗಿದು ಸಿದ್ದ ರಾಮಯ್ಯ ಅಲ್ಲಾ ರಿ ನೀವು ಆಗಿದಿರಾ ಇಲಿ ಸಿದ್ದಣ್ಣ ಘಜಿ೯ಸಿದರೆ ನಿಮ್ಮ ಬುಡವೆ ಗಡಗಡ

    Reply

Leave a Reply

Your email address will not be published.