Cricket : ಸ್ಪಿನ್ ಬಲೆಗೆ ಬಿದ್ದ ಆಫ್ರಿಕಾ : ಭಾರತಕ್ಕೆ 9 ವಿಕೆಟ್ ಸುಲಭ ಜಯ

ಸೆಂಚುರಿಯನ್ ನ ಸುಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯಗಳಿಸಿದೆ. 6 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಪಡೆ 2-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ದಕ್ಷಿಣ ಆಫ್ರಿಕಾ 32.2 ಓವರುಗಳಲ್ಲಿ 118 ಕ್ಕೆ ಆಲೌಟ್ ಆಯಿತು. ಡಿವಿಲಿಯರ್ಸ್ ಹಾಗೂ ಫಾಫ್ ಡು ಪ್ಲೆಸಿಸ್ ಅನುಪಸ್ಥಿತಿ ಆಫ್ರಿಕನ್ನರನ್ನು ಬಾಧಿಸಿತು. ಖಾಯಾ ಜೊಂಡೊ 25, ಜೆಪಿ ಡುಮಿನಿ 25 ರನ್ ಗಳಿಸಿದರು. ಉತ್ತಮ ಬೌಲಿಂಗ್ ನಡೆಸಿದ ಭಾರತದ ಸ್ಪಿನ್ ಜೋಡಿ ಯಜುವೇಂದ್ರ ಸಿಂಗ್ ಚಹಲ್ 5, ಕುಲದೀಪ್ ಯಾದವ್ 3 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತ 20.3 ಓವರುಗಳಲ್ಲಿ 119 ರನ್ ಸೇರಿಸಿ ಗೆಲುವು ಪಡೆಯಿತು. ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ 51 ಹಾಗೂ ವಿರಾಟ್ ಕೊಹ್ಲಿ 46 ರನ್ ಗಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com