BIGG BOSS : ಸ್ಪರ್ಧೆಯ ಬಗ್ಗೆ J.K ಅಸಮಾಧಾನ……ಕಾರಣವೇನು..?

ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ ಜೆಕೆ ಬಿಗ್‌ಬಾಸ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ತಾಳ್ಮೆ ಹಾಗೂ ಮನೆಯವರ ಜೊತೆ ಬೆರೆಯುವ ರೀತಿ, ಅವರ ನಡವಳಿಕೆ, ಮನರಂಜಿಸುವ ರೀತಿ ಎಲ್ಲರಿಗೂ ಇಷ್ಟವಾಗಿದ್ದು, ಅವರೇ ಗೆಲ್ಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಫೈನಲ್‌ನಲ್ಲಿ ಚಂದನ್‌ ಗೆಲುವು ಸಾಧಿಸಿದ್ದರು. ಆದರೆ ಈ ವಿಚಾರಕ್ಕೆ ಜೆಕೆ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಮೂರನೇ ಸ್ಥಾನವನ್ನು ಖುಷಿಯಿಂದಲೇ ಸ್ವಾಗತಿಸಿದ್ದರು.

ಆದರೆ ಈಗ ಬಿಗ್‌ಬಾಸ್‌ ಬಗ್ಗೆ ಜೆಕೆ ಬೇರೆಯದ್ದೇ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಮನೆಯಲ್ಲಿ ಇನ್ನೂ ಒಳ್ಳೊಳ್ಳೆಯ  ಕೆಲಸ ಮಾಡಿದ್ದೆವು. ಅದೆಲ್ಲವನ್ನು ಎಡಿಟ್‌ ಮಾಡಲಾಗಿದೆ. ಅದನ್ನು ತೋರಿಸಿದ್ದರೆ ಅಲ್ಲಿ ಹೋಗಿ ಇದ್ದದ್ದಕ್ಕೂ ಸಂತೋಷ ಎನಿಸುತ್ತಿತ್ತು ಎಂದಿದ್ದಾರೆ. ನಾನು ಬೇರೆ ಬೇರೆ ಕೆಲಸಗಳನ್ನು ಮಾಡಿದ್ದೇನೆ. ಆದರೆ ಅದೆಲ್ಲವನ್ನು ಬಿಟ್ಟು ನಾನು ಶೃುತಿ ಒಟ್ಟಿಗಿರುವ ದೃಶ್ಯಗಳನ್ನೇ ಹೆಚ್ಚು ತೋರಿಸಲಾಗಿದೆ. ನಾನು ಏನೂ ಮಾಡಿಲ್ಲ ಎಂಬಂತೆ ಬಿಂಬಿಸಲಾಗಿದೆ. ನಾನು ಬಿಗ್‌ ಬಾಸ್‌ ಮನೆಯಲ್ಲಿ ಜನರನ್ನು ಮನರಂಜಿಸುವ ಸಾಕಷ್ಟು ಕೆಲಸ ಮಾಡುತ್ತಿದ್ದೆ. ಅದೇ ನನ್ನ ಉದ್ದೇಶವಾಗಿತ್ತು. ಆದರೆ ಅದನ್ನು ತೋರಿಸಿಯೇ ಇರಲಿಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ನಾವು ಅಶ್ವಿನಿ ನಕ್ಷತ್ರ, ಪುಟ್ಟಗೌರಿ ಮದುವೆ, ಅಗ್ನಿಸಾಕ್ಷಿ, ಲಕ್ಷ್ಮಿ ಬಾರಮ್ಮ ಧಾರಾವಾಹಿಗಳ ಅಭಿನಯ ಮಾಡಿದ್ದೆವು. ಆದರೆ ಅದರಲ್ಲಿ ಅಶ್ವಿನಿ ನಕ್ಷತ್ರದ ದೃಶ್ಯಗಳನ್ನು ಪ್ರಸಾರ ಮಾಡಿಯೇ ಇಲ್ಲ. ಇದು ತುಂಬಾ ಬೋಸರವಾಗಿದೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com