ಆಕಾಶದ ಕೆಳಗೆ ಗಿಳಿ ಕುಂತೈತಲೇ ಪರಾಕ್‌… : ಕಾರ್ಣಿಕ ನುಡಿದ ವೆಂಕಪ್ಪ ಒಡೆಯರ್‌

ಬಳ್ಳಾರಿ : ಆಕಾಶದ ಕೆಳಗೆ ಗಿಳಿ ಕುಂತೈತಲೇ ಪರಾಕ್‌…..ಎಂದು ಬಳ್ಳಾರಿಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರದಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಈ ವರ್ಷದ ಭವಿಷ್ಯ ನುಡಿಯಲಾಗಿದೆ.

ಈ ಭವಿಷ್ಯವನ್ನು ವರ್ಷದ ಕಾರ್ಣಿಕ ಎಂತಲೇ ಕರೆಯಲಾಗುತ್ತಿದ್ದು, ಈ ಕಾರ್ಣಿಕದ ಆಧಾರದ ಮೇಲೆ ವರ್ಷದ ಮಳೆ, ಬೆಳೆಯನ್ನು ನಿರ್ಧರಿಸಲಾಗುತ್ತದೆ. ಮೈಲಾರ ಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪ ಒಡೆಯರ್‌ ಪ್ರತೀ ವರ್ಷ ಕಾರ್ಣಿಕ ನುಡಿಯುತ್ತಿದ್ದು, ರಾಜಕೀಯಕ್ಕೂ ಹೋಲಿಕೆ ಮಾಡಿ ವಿಶ್ಲೇಷಿಸಲಾಗುತ್ತದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ. ಅಲ್ಲದೆ ಈ ಬಾರಿ ಪ್ರಭಾವಿ ರಾಜಕೀಯ ನಾಯಕರಿಗೆ ತೊಂದರೆಯಾಗುವುದಾಗಿಯೂ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com