India Open Super Badminton : ಫೈನಲ್ ತಲುಪಿದ ಪಿ.ವಿ ಸಿಂಧು

ಓಲಿಂಪಿಕ್ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂಡಿಯಾ ಓಪನ್ ಸೂಪರ್ 500 ಟೂರ್ನಮೆಂಟಿನ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಥಾಯ್ಲೆಂಡಿನ ರಚನಾಕ್ ಇಂಟನಾನ್ ಅವರನ್ನು 21-13, 21-15 ಪಾಯಿಂಟ್ ಗಳಿಂದ ಮಣಿಸಿದರು.

ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಅಮೇರಿಕದ ಬೀವಿನ್ ಝಾಂಗ್ ಅವರನ್ನು ಎದುರಿಸಲಿದ್ದಾರೆ. ಕಳೆದ ಬಾರಿಯ ಚಾಂಪಿಯನ್ ಕೂಡ ಆಗಿರುವ ಸಿಂಧು, ಇಂಡಿಯಾ ಓಪನ್ ಪ್ರಶಸ್ತಿಯನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಸೆಣಸಾಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com