ಪತಂಜಲಿ ಕಾರ್ಪೋರೇಟ್ ಕಂಪನಿಯಲ್ಲ, ಸೇವೆ ಮಾತ್ರ ನಮ್ಮ ಗುರಿ : ಬಾಬಾ ರಾಮದೇವ್

ಬಳ್ಳಾರಿಯಲ್ಲಿ ಬಾಬಾ ರಾಮ್ ದೇವ್ ಹೇಳಿಕೆ ನೀಡಿದ್ದಾರೆ. ‘ ಈ ಹಿಂದೆ ಹೊಸಪೇಟೆ ತನಕ ಬಂದಿದ್ದೇನೆ. ಇದೇ ಮೊದಲು ಬಳ್ಳಾರಿಗೆ ಬಂದಿದ್ದೇನೆ, ಬಳ್ಳಾರಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಯೋಗ ಶಿಬಿರದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ ‘ ಎಂದು ಹೇಳಿದ್ದಾರೆ.

ಬೀಡಿ ಸಿಗರೇಟು ಅಫಿಮು ಗಾಂಜಾದಿಂದ ಸಮಾಜ ಹಾಳಾಗಿದೆ. ಇದರಿಂದ ನಮ್ಮ ಜನರನ್ನು ದೂರ ಮಾಡಬೇಕು, ಆರೋಗ್ಯಕರ ಭಾರತವನ್ನು ನಾವು ಕಟ್ಟಬೇಕಾಗಿದೆ. ಯೋಗ ಕೂಡ ಭಾರತದ ಒಂದು ಸಂಸಸ್ಕೃತಿಯಾಗಿದೆ. ಜನರು ಧರ್ಮಕ್ಕೆ ಯೋಗಕ್ಕೆ ಆಯುರ್ವೇದಕ್ಕೆ ಜಾಸ್ತಿ ಒತ್ತು ಕೊಡಬೇಕಾಗಿದೆ.

ಪತಂಜಲಿ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅನಾರೋಗ್ಯಕ್ಕಾಗಿ ೧೦ ಲಕ್ಷ ಕೋಟಿ ಖರ್ಚಾಗ್ತಿದೆ. ಯೋಗ ಮಾಡಿದ್ರೆ ಮೋಡಿ ಕೇರ್ ಗೆ ಹೋಗುವ ಅವಶ್ಯಕತೆ ಇಲ್ಲ, ಔಷಧಿಗಳಿಂದ ಎಲ್ಲ ರೋಗ ನಿವಾರಣೆಯಾಗೋಲ್ಲ, ವೈಜ್ಞಾನಿಕವಾಗಿ ದೃಢವಾಗಿದೆ, ಯೋಗದಿಂದ ಆರೋಗ್ಯ ಮತ್ತು ಸಂಪತ್ತು ಎರಡೂ ಗಳಿಸಬಹುದು,

ಸ್ವದೇಶಿ ವಸ್ತುಗಳ ಬಳಕೆಗೆ ಆಧ್ಯತೆ ನೀಡಿದ್ದೇವೆ, ಪತಂಜಲಿ ಕಾರ್ಪೋರೆಟ್ ಕಂಪನಿಯಲ್ಲ, ಸೇವೆ ಮಾತ್ರ ನಮ್ಮಗುರಿ, ಪತಂಜಲಿ ಮೇಲೆ ಭಾರತದ ಮೇಲೆ ವಿಶ್ವಾಸ ಇಟ್ಟಿದ್ದಾರೆ.

ಜಾತಿ ವಿಚಾರದಲ್ಲಿ ನಂಬಿಕೆ ಇಲ್ಲ, ಯಾರು ಯಾವ ಜಾತಿಯಲ್ಲಿ ಇದ್ದರೂ ನಾವೇಲ್ಲರೂ ಭಾರತೀಯರು. ಬೇಧ, ಭಾವ ಮಾಡಬಾರದು, ಹಿಂದೂಸ್ತಾನ್ ದಲ್ಲಿ ಹಿಂದೂ ಆಗಿವೆ ಬದುಕುವೆ, ಯೋಗ ಸಾರ್ವತ್ರಿಕ ಮಾಡಿದ್ದೇವೆ, ಅಂತರಾಷ್ಟ್ರೀಯ ಯೋಗ ದಿನ ಮಾಡಲಾಗಿದೆ. ಮೋದಿ ಯೋಗದ ಬಗ್ಗೆ ಪ್ರಚಾರ ಮಾಡಿದ್ದಾರೆ, ಪ್ರಧಾನಿ ಮೋದಿ ಸೇರಿದಂತೆ ಹಾಲಿವುಡ್ ಬಾಲಿವುಡ್ ನವರು ಯೋಗ ಮಾಡ್ತಾರೆ

ಕೇಂದ್ರ ಆಯುಷ್ ಯೋಗಾಲಯ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿಲ್ಲ, ಈ ಬಗ್ಗೆ ನಾನು ಆಕ್ಷೇಪಣೆ ಮಾಡಿದ್ದೇನೆ, ಕ್ರಿಯಾತ್ಮಕವಾಗಿ, ಗುಣಾತ್ಮಕವಾಗಿ ಕೆಲಸ ಮಾಡಬೇಕಿದೆ. ಆಯುಷ್ ಮಂತ್ರಾಲಯಕ್ಕೆ ಪತಂಜಲಿ ಮಾರ್ಗದರ್ಶನ ಮಾಡಿಲಿದ್ದೇವೆ ‘ ಎಂದಿದ್ದಾರೆ.

Leave a Reply

Your email address will not be published.