ರಾಮಮಂದಿರ ವಿರೋಧಿಸುವ ಮುಸ್ಲೀಮರು ಪಾಕಿಸ್ತಾನಕ್ಕೆ ಹೋಗಿ ISIS ಸೇರಲಿ : ವಾಸಿಂ ರಿಜ್ವಿ

ಫೈಜಾಬಾದ್‌ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಮುಸ್ಲೀಮರು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಇಲ್ಲವೇ ಐಸಿಸ್‌ ಭಯೋತ್ಪಾದಕ ಸಂಘಟನೆ ಸೇರಲಿ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್‌ ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ಹೇಳಿದ್ದಾರೆ.

ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿದ್ದ ರಿಜ್ವಿ, ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣ ವಿಚಾರವನ್ನು ಜಾತ್ಯಾತೀತರು ವಿರೋಧಿಸುವುದಿಲ್ಲ. ಆದ್ದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ವಿರೋಧಿಸುವಲರು ಜಾತ್ಯಾತೀತರಲ್ಲ. ಅಂತಹ ಮುಸ್ಲೀಮರೆಲ್ಲ ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ, ಇಲ್ಲವೇ ಐಸಿಸ್‌ ಸೇರಲಿ ಎಂದಿದ್ದಾರೆ.

ಭಾರತದಲ್ಲಿ ಮೂಲಬೂತವಾದಿಗಳಿಗೆ ಜಾಗವಿಲ್ಲ. ಅಯೋಧ್ಯೆ ಪವಿತ್ರ ಭೂಮಿ. ಅಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೇ ಹೊರತು ಮಸೀದಿಯಲ್ಲ. ಮಸೀದಿ ಬೇಕು ಎಂಬುವವರಿಗೆ ಬೇರೆ ಜಾಗ ಇದೆ. ಅವರು ಅಲ್ಲಿಗೇ ಹೋಗಲಿ ಎಂದಿದ್ದಾರೆ.

ಇನ್ನು ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ರಿಜ್ವಿ ಅವರನ್ನು ಬಂಧಿಸುವಂತೆ ಸೇವ್‌ ವಕ್ಫ್‌ ಇಂಡಿಯಾ ಉಪಾಧ್ಯಕ್ಷ ರಿಜ್ವಾನ್‌ ಮುಸ್ತಫಾ ಒತ್ತಾಯಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com