ಮನೆಯ ಟೆರಸ್‌ ಮೇಲೆ ಮಗುವಿನ ರುಂಡ ಪತ್ತೆ : ಗ್ರಹಣ ದಿನದಂದು ನಡೆದಿತ್ತೇ ವಾಮಾಚಾರ ?

ತೆಲಂಗಾಣ : ಜನವರಿ 31ರಂದು ನಡೆದ ಚಂದ್ರಗ್ರಹಣ ವಿಶೇಷವಾಗಿದ್ದು, ಇಡೀ ದೇಶದ ಜನತೆ ಅದನ್ನು ಕುತೂಹಲದಿಂದ ವೀಕ್ಷಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಗ್ರಹಣವನ್ನು ಆಚರಿಸಿದ್ದಾರೆ.

ಈ ಮಧ್ಯೆ ತೆಲಂಗಾಣದ ಚಿಲ್ಕಾ ನಗರ್‌ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮನೆಯ ಮಹಡಿಯ ಮೇಲೆ 3 ತಿಂಗಳ ಮಗುವಿನ ರುಂಡ ಪತ್ತೆಯಾಗಿದೆ. ದುಷ್ಕರ್ಮಿಗಳು ರುಂಡವನ್ನು ಅಲ್ಲೇ ಬಿಟ್ಟು, ದೇಹವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾಮಾಚಾರ ಪ್ರಯೋಗ ನಡೆಸಿರುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ.

ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com