Ugly Girl ಎಂದದ್ದಕ್ಕೆ ಈ ಬಾಲಿವುಡ್‌ ನಟಿ ಕೊಟ್ರು ಖಡಕ್‌ ಉತ್ತರ !

ತನ್ನನ್ನು ಕುರೂಪಿ ಎಂದವರಿಗೆ ಬಾಲಿವುಡ್‌ ನಟಿ ದಿಶಾ ಪಠಾನಿ ತಕ್ಕ ಉತ್ತರ ನೀಡಿದ್ದಾರೆ. ದಿಶಾ ಪಠಾನಿಯ ಶಾಲಾ ದಿನಗಳ ಫೋಟೋ ಒಂದನ್ನು ವೆಬ್‌ಸೈಟ್‌ನಲ್ಲಿ ಹಕಿ ಅದಕ್ಕೆ ದಿಶಾ ಚಿಕ್ಕವಳಿದ್ದಾಗ ಎಷ್ಟು ಕುರೂಪಿಯಾಗಿದ್ದಳು ಎಂದು ಶೀರ್ಷಿಕೆ ನೀಡಿದ್ದರು.

ಇದನ್ನು ನೋಡಿದ ದಿಶಾ, ಶಾಲಾ ದಿನಗಳಲ್ಲಿ ಶಾಲೆಯ ಸಮವಸ್ತ್ರ ಧರಿಸದೆ ಮತ್ತೇನು ಗೌನ್‌ ಧರಿಸಿ, ಚೆನ್ನಾಗಿ, ಮಾರ್ಡನ್‌ ಆಗಿ ಹೇರ್‌ ಸ್ಟೈಲ್, ಮೇಕಪ್‌ ಮಾಡಿಕೊಂಡು ನಾನು ಶಾಲೆಗೆ ಹೋಗಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ದಿಶಾರ ಈ ಬೋಲ್ಡ್‌ ಹೇಳಿಕೆಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಅಲ್ಲದೆ ಸರಿಯಾದ ಹೇಳಿಕೆ ನೀಡಿದ್ದಿರಿ ಎಂದು ಕಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಸ್ಟಾರ್‌ ಕ್ರಿಕೆಟರ್‌ ಧೋನಿ ಅವರ ಜೀವನಾಧಾರಿತ ಸಿನಿಮಾ ಧೋನಿ : ದಿ ಅನ್‌ಟೋಲ್ಡ್‌ ಸ್ಟೋರಿ ಸಿನಿಮಾದ ಮೂಲಕ ಮಿಂಚಿದ್ದ ದಿಶಾ, ಸದ್ಯ ಭಾಗಿ -2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com