ಮಡಕೇರಿಯಲ್ಲಿ ಮೂವರು ನಕ್ಸಲರು ಪ್ರತ್ಯಕ್ಷ : ಶುರುವಾಯ್ತು ಕೂಂಬಿಂಗ್ ಕಾರ್ಯಾಚರಣೆ

ಮಡಕೇರಿ : ಸಂಪಾಂಜೆ ಬಳಿ ಮೂವರು ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಗುಡ್ಡೇಗದ್ದೆ ಬಳಿ ಮೂವರು ನಕ್ಸಲರು ಮನೆಯೊಂದಕ್ಕೆ ನುಗ್ಗಿ ಬೆದರಿಸಿ ಅಡುಗೆ ಸಾಮಗ್ರಿಗಳನ್ನು ಪಡೆದಿರುವುದಾಗಿ ತಿಳಿದುಬಂದಿದ್ದು, ಶುಕ್ರವಾರ ರಾತ್ರಿ ಘಟನೆ ನಡೆದಿದೆ.

ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಮೂವರು ನಕ್ಸಲರು ಶುಕ್ರವಾರ ರಾತ್ರಿ ಗಣೇಶ್‌ ಎಂಬುವವರ ಮನೆಗೆ ನುಗ್ಗಿ ಅವರನ್ನು ಬೆದರಿಸಿ ಅಕ್ಕಿ, ಖಾರದಪುಡಿ ಸೇರಿದಂತೆ ಅಡುಗೆ ಸಾಮಗ್ರಿಗಳನ್ನು ತರಿಸಿಕೊಂಡು ಕಾಡಿನಲ್ಲಿ ಮರೆಯಾಗಿದ್ದಾರೆ.

ಮಡಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಗಣೇಶ್ ಅವರ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಎಫ್‌ಐಆರ್‌ ಸಹ ದಾಖಲಿಸಿದ್ದು, ನಕ್ಸಲ್‌ ನಿಗ್ರಹ ಪಡೆಯ ಸಿಬ್ಬಂದಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಈ ನಕ್ಸಲರೇ ಶಿರಾಡಿಯಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com