ಅಣ್ಣ-ಅತ್ತಿಗೆಗೆ ಶೂಟ್ ಮಾಡ್ದ, ತಾನೂ ಗುಂಡು ಹಾರಿಸಿಕೊಂಡ ಪಾಪಿ ತಮ್ಮ …!

ಮಡಕೇರಿ :  ಕೊಡಗು ಜಿಲ್ಲೆಯಲ್ಲಿ ಭೀಕರ ಶೂಟೌಟ್‌ ನಡೆದಿದ್ದು, ಮೂವರು ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಅಣ್ಣ ಹಾಗೂ ಅತ್ತಿಗೆಯನ್ನ ಶೂಟೌಟ್‌ ಮಾಡಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತರನ್ನು ಅಣ್ಣ ದೇವಯ್ಯ (54), ಅತ್ತಿಗೆ ಪ್ರೇಮ (48) ಸಹೋದರ ತಮ್ಮಯ್ಯ ಎಂದು ಹೆಸರಿಸಲಾಗಿದೆ. ಅಣ್ಣ ಹಾಗೂ ಅತ್ತಿಗೆ ಮೃತಪಟ್ಟ ನಂತರ ತಮ್ಮಯ್ಯ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೆ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.

ಅಣ್ಣ -ತಮ್ಮನ ಮಧ್ಯೆ ಆಸ್ತಿ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಆಸ್ತಿ ವಿಚಾರವಾಗಿ ಅಣ್ಣ ಕೋರ್ಟ್‌ ಮೆಟ್ಟಿಲೇರಿದ್ದ. ಅಣ್ಣನ ಪರವೇ ಕೋರ್ಟ್ ತೀರ್ಪು ನೀಡಿತ್ತು. ಕೋರ್ಟ್‌ ತೀರ್ಪನ್ನು ಖಂಡಿಸಿದ್ದ ತಮ್ಮಯ್ಯ , ಇಂದು ಅಣ್ಣನ ಮನೆಗೆ ಬಂದು ಏಕಾಏಕಿ ಅಣ್ಣ ಹಾಗೂ ಅತ್ತಿಗೆಗೆ ಗುಂಡು ಹಾರಿಸಿದ್ದಾನೆ. ಬಳಿಕ ಸ್ಥಳದಲ್ಲಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೀಡಾಗಿದ್ದಾನೆ.

ಮಡಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com