ಮೊದಲು ಬ್ರಾಹ್ಮಣರ ಬುದ್ದಿ ಬಿಡಿ : ಸಂಸದ ಪ್ರಹ್ಲಾದ್‌ ಜೋಷಿಗೆ ಬಂತು ಬೆದರಿಕೆ ಪತ್ರ

ಹುಬ್ಬಳ್ಳಿ : ಸಂಸದ ಪ್ರಹ್ಲಾದ್‌ ಜೋಷಿ ಅವರಿಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ. ನಾವು ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಮೊದಲು ನಿಮ್ಮ ಬ್ರಾಹ್ಮಣ ಬುದ್ದಿಯನ್ನು ಬಿಡಿ. ನಮ್ಮ ವಿಕೆ ಬಾಸ್‌ (ವಿನಯ್‌ ಕುಲಕರ್ಣಿ) ತಂಟೆಗೆ ಬರಬೇಡಿ. ಒಂದು ವೇಳೆ ಅವರ ತಂಟೆಗೆ ಬಂದರೆ ಸರಿಯಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪತ್ರದ ಲಕೋಟೆ ಮೇಲೆ ಮಂಜುನಾಥ ಎಂಬ ಹೆಸರಿರುವುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಹುಬ್ಬಳ್ಳಿ -ಧಾರವಾಡ ಆಯುಕ್ತರಿಗೆ ಪ್ರಹ್ಲಾದ್‌ ಜೋಷಿ ದೂರು ನೀಡಿದ್ದಾರೆ.

Leave a Reply

Your email address will not be published.