ನಿಮ್ಮ ಮಕ್ಕಳಿಗೆ ಪರೀಕ್ಷೆ ಭಯವೇ……? ಪ್ರಧಾನಿ ಮೋದಿ ಬಳಿಯಿದೆ ಪರಿಹಾರ..!!

ದೆಹಲಿ : ಸಾಮಾನ್ಯವಾಗಿ ಮಕ್ಕಳು ಪರೀಕ್ಷೆಗೆ ಭಯ ಪಡುತ್ತಾರೆ. ಮಕ್ಕಳ ಭಯದ ಜೊತೆ ಪೋಷಕರಿಗೂ ಭಯ ಇರುತ್ತದೆ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಬೇಕೆಂಬ ಆಸೆ ಎಲ್ಲಾ ಮಕ್ಕಳಿಗೂ ಇರುತ್ತದೆ.

ಆದ ಕಾರಣ ಪ್ರಧಾನಿ ಮೋದಿ ಮಕ್ಕಳು ಹಾಗೂ ಪೋಷಕರಿಗೆ ಪರೀಕ್ಷೆ ಬರೆಯಲು ಆಸರೆಯಾಗಿದ್ದು, ಮಕ್ಕಳ ಒತ್ತಡವನ್ನು ಕಡಿಮೆ ಮಾಡುವ ದೃಷ್ಠಿಯಿಂದ ವಿದ್ಯಾರ್ಥಿಗಳಿಗಾಗಿ ಮೋದಿ, ಎಕ್ಸಾಂ ವಾರಿಯರ್ಸ್‌ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಈ ಪುಸ್ತಕದಲ್ಲಿ ಮೋದಿ, ಮಕ್ಕಳು ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ. ಅಂಕಗಳ ಹಿಂದೆ ಓಡಬೇಡಿ. ವಿದ್ಯಾಭ್ಯಾಸದ ಕಡೆ ಮಾತ್ರ ಗಮನ ಕೊಡಿ ಎಂಬ ಸಂದೇಶ ನೀಡಿದ್ದಾರೆ.

ಇದರಲ್ಲಿ 24 ಅಂಶಗಳನ್ನು ಹೇಳಲಾಗಿದ್ದು, ಮಕ್ಕಳು ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಎಂಜಾಯ್‌ ಮಾಡಬೇಕು. ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಂಡು, ನಿಮ್ಮ ಸಾಮರ್ಥ್ಯ ಅರಿತುಕೊಂಡು ಪರೀಕ್ಷೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ.

ಪರೀಕ್ಷೆಗೂ ಉತ್ತಮ ನಿದ್ರೆ ಮಾಡಿ, ಸರಿಯಾಗಿ ಊಟ, ಆಟ ಎಲ್ಲವನ್ನೂ ಮಾಡಿ. ಅದು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com