ಚಕ್ ದೇ ದ್ರಾವಿಡ್ : ಆಟಗಾರನಾಗಿದ್ದಾಗ ಕೈಗೂಡದ ವಿಶ್ವಕಪ್ ಕನಸು ನನಸಾಗಿದ್ದು ಕೋಚ್ ಆದಾಗ

ಪ್ರತಿಯೊಬ್ಬ ಕ್ರಿಕೆಟ್ ಆಟಗಾರನೂ ತಾನಾಡುವ ತಂಡಕ್ಕಾಗಿ ಒಮ್ಮೆಯಾದರೂ ವಿಶ್ವಕಪ್ ಗೆಲ್ಲಬೇಕೆಂಬ ಕನಸನ್ನು ಹೊಂದಿರುತ್ತಾರೆ. ಆದರೆ ಇದು ಎಲ್ಲರಿಗೂ ಕೈಗೂಡುವುದಿಲ್ಲ. 24 ವರ್ಷ ಕ್ರಿಕೆಟ್ ಆಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಅವರಾಡಿದ 6ನೇ ವಿಶ್ವಕಪ್ ನಲ್ಲಿ ಟ್ರೋಫಿಯ ಕನಸು ನನಸಾಯಿತು. ‘ ದಿ ವಾಲ್ ‘ ‘ ಮಿಸ್ಟರ್ ಡಿಪೆಂಡೆಬಲ್ ‘ ಖ್ಯಾತಿಯ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಆಟಗಾರನಾಗಿದ್ದಾಗ, ನಾಯಕನಾಗಿದ್ದಾಗ ವಿಶ್ವಕಪ್ ಕನಸು ಕೈಗೂಡಿರಲಿಲ್ಲ.

  • ಇಂಗ್ಲೆಂಡ್ ಆತಿಥ್ಯ ವಹಿಸಿದ್ದ 1999 ರ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಅತಿ ಹೆಚ್ಚು ರನ್ ಗಳಿಸಿದ್ದರು. ಈ ಟೂರ್ನಿಯಲ್ಲಿ ಮಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತ ಸೂಪರ್ ಸಿಕ್ಸ್ ಹಂತದಲ್ಲಿಯೇ ಹೊರಬಿದ್ದಿತ್ತು.

Image result for 1996 worldcup india dravid

  • ದಕ್ಷಿಣ ಆಫ್ರಿಕಾದಲ್ಲಿ 2003 ವಿಶ್ವಕಪ್ ನಲ್ಲಿ ಸೌರವ್ ಗಂಗೂಲಿ ನಾಯಕತ್ವದ ಭಾರತ ಫೈನಲ್ ತಲುಪಿತ್ತು. ಆದರೆ ರಿಕಿ ಪಾಂಟಿಂಗ್ ನೇತೃತ್ವದ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ನಿರಾಸೆ ಅನುಭವಿಸಿತ್ತು.

Image result for 2003 worldcup final loss dravid

  • ವೆಸ್ಟ್ ಇಂಡೀಸ್ ನಲ್ಲಿ ನಡೆದ 2007 ರ ವಿಶ್ವಕಪ್ ಟೂರ್ನಿಗೆ ಭಾರತ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ತೆರಳಿತ್ತು. ಆದರೆ ಭಾರತ, ಬಾಂಗ್ಲಾದೇಶ ವಿರುದ್ಧ ಸೋತು ಗ್ರೂಪ್ ಹಂತದಲ್ಲಿಯೇ ಟೂರ್ನಿಯಿಂದ ನಿರ್ಗಮಿಸಿತ್ತು.

Related image

  • 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಎರಡನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿಯಿತು. ಆದರೆ ಇನ್ನೂ ನಿವೃತ್ತಿ ಹೊಂದಿರದ ರಾಹುಲ್ ದ್ರಾವಿಡ್ ಈ ತಂಡದ ಸದಸ್ಯರಾಗಿರಲಿಲ್ಲ.

Related image

ಆದರೆ ರಾಹುಲ್ ದ್ರಾವಿಡ್ ಕೋಚ್ ಆಗಿರುವ, ಪೃಥ್ವಿ ಶಾ ನೇತೃತ್ವದ ಭಾರತ  ತಂಡ ನ್ಯೂಜಿಲೆಂಡ್ ನಲ್ಲಿ ಅಂಡರ್-19 ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ. ದ್ರಾವಿಡ್ ಭಾರತ ತಂಡದಲ್ಲಿ ಆಟಗಾರನಾಗಿದ್ದಾಗ, ನಾಯಕನಾಗಿದ್ದಾಗ ಕೈಗೂಡದ ವಿಶ್ವಕಪ್ ಕನಸು, ಕೋಚ್ ಆದಾಗ ನನಸಾಗಿದೆ.

Image result for rahul dravid u-19 worldcup presentation ceremony

Leave a Reply

Your email address will not be published.

Social Media Auto Publish Powered By : XYZScripts.com